ಮೃತ ಪುತ್ರಿಯ ನೆನಪಿನಲ್ಲಿ ವಿದ್ಯಾರ್ಥಿನಿಯರ ಶುಲ್ಕ ಪಾವತಿಸಿದ ಕ್ಲರ್ಕ್: ಕ್ಯಾಂಪಸ್ ಫ್ರಂಟ್ ಅಭಿನಂದನೆ

Update: 2018-08-02 15:00 GMT

ಕಲ್ಬುರ್ಗಿ, ಆ. 2: ಮೃತ ತನ್ನ ಪುತ್ರಿಯ ನೆನಪಿನಲ್ಲಿ ಇಲ್ಲಿನ ಮಕ್ಟಂಪುರದ ಎಂಪಿಎಚ್‌ಎಸ್ ಸರ್ಕಾರಿ ಪ್ರೌಢ ಶಾಲೆಯ ಕ್ಲರ್ಕ್ ಒಬ್ಬರು ಸುಮಾರು 45 ವಿದ್ಯಾರ್ಥಿನಿಯರ ಶುಲ್ಕ ಪಾವತಿಸಿದ್ದ ವರದಿಯು 'ವಾರ್ತಾಭಾರತಿ'ಯಲ್ಲಿ ಕಳೆದ ವಾರ ಪ್ರಕಟವಾಗಿತ್ತು. ಈ ವರದಿಯ ಮೇಲೆ ಕ್ಯಾಂಪಸ್ ಫ್ರಂಟ್ ಗುಲ್ಬರ್ಗಾ ಘಟಕವು ಎಂಪಿಎಚ್‌ಎಸ್ ಸರ್ಕಾರಿ ಪ್ರೌಢ ಶಾಲೆಯ ಕ್ಲರ್ಕ್ ಬಸವರಾಜ್ ರನ್ನು ಭೇಟಿ ಮಾಡಿ ಅವರ ಶಿಕ್ಷಣದ ಮೇಲಿರುವ ಕಾಳಜಿಯನ್ನು ಪ್ರಶಂಸಿಸಿ ಅವರ ಮಗಳ ಸಾವಿಗೆ ಸಂತಾಪ ಸೂಚಿಸಲಾಯಿತು.

ನಿಯೋಗದಲ್ಲಿ ಕ್ಯಾಂಪಸ್ ಫ್ರಂಟ್ ಗುಲ್ಬರ್ಗಾ ಘಟಕದ ಸಂಚಾಲಕ ಮುಹಮ್ಮದ್ ಸಮಾಮ ಸಮಿತಿ ಸದಸ್ಯರಾದ ಮುಹಮ್ಮದ್ ಅದ್ನಾನ್, ಮುಹಮ್ಮದ್ ಫುರ್ಕಾನ್ ಮತ್ತು ಝಯೀಮ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News