×
Ad

ದ.ಕ.ಜಿಲ್ಲೆಯ ಮುಜರಾಯಿ ಇಲಾಖಾ ವ್ಯಾಪ್ತಿಯ ದೇವಸ್ಥಾನಗಳ ವೆಬ್ ಸೈಟಿಗೆ ಸಚಿವ ಖಾದರ್ ಚಾಲನೆ

Update: 2018-08-02 21:07 IST

ಮಂಗಳೂರು, ಜು. 2: ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಧಾಯ ದತ್ತಿಗಳ ಇಲಾಖೆಯ ವ್ಯಾಪ್ತಿಯ ಪ್ರವರ್ಗ ಎ.ಬಿ.ಮತ್ತು ಸಿ ಸೇರಿದಂತೆ ಒಟ್ಟು 491 ದೇವಸ್ಥಾನಗಳ ಮಾಹಿತಿಗಳನ್ನೊಳಗೊಂಡ ವೆಬ್ ಸೈಟನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಮತ್ತು ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದ್ದಾರೆ.

ಈ ವೆಬ್ ಸೈಟ್ ನಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಧರ್ಮದಾಯ ದತ್ತಿಗಳ ಇಲಾಖೆ ಇದರ ಬಗ್ಗೆ ಜಿಲ್ಲಾ ಧರ್ಮಿಕ ಪರಿಷತ್ ,ಆರಾಧನಾ ಯೋಜನೆ, ಸಾಮಾನ್ಯ ಅನುದಾನ, ಸಾಮಾನ್ಯ ಸಂಗ್ರಹಣಾನಿಧಿ ಯೋಜನೆ, ಜೀರ್ಣೋದ್ದಾರ ಸಮಿತಿ ರಚನೆ, ತಸ್ತೀಕು, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಯೋಜನೆ ಇದರ ಬಗ್ಗೆ ಮಾಹಿತಿ ನೀಡಲಾಗಿದೆ. http://www.dkannadatemples.com ಈ ವೆಬ್ ಸೈಟ್‌ನಲ್ಲಿ ಎಲ್ಲಾ ದೇವಸ್ಥಾನಗಳ ಇತಿಹಾಸ, ಪುಜಾವಿವರ, ನಕ್ಷೆ , ವಿಳಾಸ, ದೂರವಾಣಿ , ಸಂಪರ್ಕ ರಸ್ತೆ ಗಳ ವಿವರಗಳನ್ನು ನೀಡಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News