×
Ad

ಆ.29: ದ.ಕ. ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಚುನಾವಣೆ; ಸೆ. 1ಕ್ಕೆ ಮತ ಎಣಿಕೆ

Update: 2018-08-02 21:36 IST

ಮಂಗಳೂರು, ಆ.2: ರಾಜ್ಯ ಚುನಾವಣಾ ಆಯೋಗವು ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ಗುರುವಾರ ಆದೇಶ ಹೊರಡಿಸಿದ್ದು, ಪುತ್ತೂರು, ಉಳ್ಳಾಲ, ಬಂಟ್ವಾಳದ ನಗರಸಭೆ-ಪುರಸಭೆಗಳ ಚುನಾವಣೆಗೆ ಆ.29ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ.

ನಾಮಪತ್ರ ಸಲ್ಲಿಸಲು ಆ.17 ಕೊನೆಯ ದಿನವಾಗಿದ್ದು, ಆ.18ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ಉಮೇದುವಾರಿಕೆಗಳನ್ನು ಹಿಂದೆಗೆದು ಕೊಳ್ಳಲು ಆ. 20 ಕೊನೆಯ ದಿನವಾಗಿದೆ. ತಾಲೂಕು ಕೇಂದ್ರಗಳಲ್ಲಿ ಸೆ. 1ರಂದು ಬೆಳಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ.

ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು ಆ.2ರಿಂದ ಜಾರಿಯಾಗಿದ್ದು, ಸೆ. 1ರವರೆಗೆ ಜಾರಿಯಲ್ಲಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News