×
Ad

ಬಿಐಟಿ, ಬೀಡ್ಸ್ : ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

Update: 2018-08-02 21:59 IST

ಮಂಗಳೂರು, ಆ. 2: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ ) ಹಾಗು ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ ( ಬೀಡ್ಸ್ ) ವಿದ್ಯಾಸಂಸ್ಥೆಯ ಪ್ರಥಮ ವರ್ಷದ ಇಂಜಿನಿಯರಿಂಗ್ ಹಾಗೂ ಆರ್ಕಿಟೆಕ್ಚರ್ ವಿದ್ಯಾರ್ಥಿಗಳ ಪ್ರವೇಶ ಹಾಗು ಸ್ವಾಗತ ಕಾರ್ಯಕ್ರಮವು ಆ.1ರಂದು ಆರಂಭವಾಗಿದ್ದು, 21 ದಿನಗಳ ಕಾಲ ನಡೆಯಲಿದೆ. 
 
ವಿದ್ಯಾರ್ಥಿಗಳಿಗೆ ತಮ್ಮ ಮುಂದಿರುವ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಒಬ್ಬ ಯಶಸ್ವಿ ಇಂಜಿನಿಯರ್ ಅಥವಾ ಅರ್ಕೆಟೆಕ್ಟ್ ಆಗಲು ಅವಲಂಬಿಸಬೇಕಾದ ದಾರಿಯನ್ನು ತೋರಿಸುವ ಕಲ್ಪನೆಯನ್ನು ಈ ಕಾರ್ಯಕ್ರಮ ಹೊಂದಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಬ್ಯಾರೀಸ್ ಸಮೂಹದ ಅಧ್ಯಕ್ಷರಾದ ಸೈಯ್ಯದ್ ಮುಹಮ್ಮದ್ ಬ್ಯಾರಿ ಉದ್ಘಾಟನಾ ಭಾಷಣ ಮಾಡಿದರು. ತಮ್ಮ ಭಾಷಣದಲ್ಲಿ ಅವರು ಜೀವನದ ಮೂರು ಪ್ರಮುಖ ಅಂಶಗಳಾದ ಸತ್ಯ, ನ್ಯಾಯ ಮತ್ತು ಸಹೋದರತ್ವದ ಬಗ್ಗೆ ಮಾತನಾಡಿದರು.

ಬಿಐಟಿ ಪ್ರಾಂಶುಪಾಲರಾದ ಡಾ. ಆ್ಯಂಟನಿ ಎ.ಜೆ, ಬಿಟ್/ಬೀಡ್ಸ್‌ನಲ್ಲಿ ದೊರೆಯುವ ಸೌಲಭ್ಯಗಳನ್ನು ತಮ್ಮ ನಾಲ್ಕು ವರ್ಷಗಳ ಶೈಕ್ಷಣಿಕ ಸಮಯದಲ್ಲಿ ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಡೀನ್ ಡಾ. ಪಿ. ಮಹಬಲೇಶ್ವರಪ್ಪ ವೈಯಕ್ತಿಕ ಸ್ವಚ್ಛತೆ ಮತ್ತು ಸಾರ್ವಜನಿಕ ಸ್ವಚ್ಛತೆ ಬಗ್ಗೆ ಮಾತನಾಡಿದರು. ಬೀಡ್ಸ್ ಪ್ರಾಂಶುಪಾಲ ಪ್ರೊ. ಅಶೋಕ್ ಎಲ್.ಪಿ ಬ್ಯಾರೀಸ್ ಸಂಸ್ಥೆಯ ಮೂಲ ಸೌಕರ್ಯಗಳ ಬಗ್ಗೆ ತಿಳಿಸಿದರು. ಬಿಐಟಿ -ಪಾಲಿಟೆಕ್ನಿಕ್‌ನ ಪ್ರಾಂಶುಪಾಲರಾದ ಡಾ. ಅಝೀಝ್ ಮುಸ್ತಫ, ಪರೀಕ್ಷೆಗಾಗಿ ಓದಬೇಡಿ, ನಿಮ್ಮ ಜ್ಞಾನ ವೃದ್ಧಿಗಾಗಿ  ಓದಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಸಂಚಾಲಕ ಡಾ. ಮುಸ್ತಫ ಬಸ್ತಿಕೋಡಿ  ಸ್ವಾಗತಿಸಿದರು. ಪ್ರಥಮ ವರ್ಷದ ವಿಭಾಗೀಯ ಮುಖ್ಯಸ್ಥೆ  ಡಾ. ಅಂಜುಮ್ ಖಾನ್ ವಂದಿಸಿದರು. ಬಿಐಟಿ /ಬೀಡ್ಸ್‌ನ ಎಲ್ಲ ವಿಭಾಗಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.  ಕಾರ್ಯಕ್ರಮ ರಾಷ್ಟ್ರಗೀತೆಯೊಂದಿಗೆ ಮುಗಿಯಿತು. ಸಿಎಸ್‌ಇ ವಿಭಾಗದ ಪ್ರೊ. ಅಂಕಿತಾ ಕಾರ್ಯಮ್ರಕವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News