ಪುತ್ತೂರು: ಭ್ರಷ್ಟಾಚಾರ ನಿಗ್ರಹ ದಳದಿಂದ ಕೆಎಸ್ಆರ್ಟಿಸಿ ಘಟಕಕ್ಕೆ ದಾಳಿ
Update: 2018-08-02 22:19 IST
ಪುತ್ತೂರು, ಆ. 2: ಕೆಎಸ್.ಆರ್.ಟಿ.ಸಿಯ ಲೆಕ್ಕಪತ್ರ ವಿಭಾಗದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮುಕ್ರಂಪಾಡಿಯಲ್ಲಿರುವ ಘಟಕಕ್ಕೆ ದಾಳಿ ನಡೆಸಿ ತನಿಖೆ ನಡೆಸಿದರು.
ಎಡಿಜಿಪಿಯವರ ನಿರ್ದೇಶನದಂತೆ ಎಸ್.ಪಿ ಶೃತಿ ನೇತೃತ್ವದಲ್ಲಿ ಡಿವೈಎಸ್ಪಿ ಸುಧೀರ್ ಎಂ ಹೆಗ್ಡೆ ಹಾಗೂ ಇನ್ಸ್ ಪೆಕ್ಟರ್ ಯೋಗೀಶ್ ಕುಮಾರ್ ಹಾಗೂ ಸಿಬ್ಬಂದಿ ಪ್ರಶಾಂತ್, ಗಣೇಶ್ , ವೈಶಾಲಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.