×
Ad

ಮಂಗಳೂರು: ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಎಸಿಬಿ ತಪಾಸಣೆ

Update: 2018-08-02 22:35 IST

ಮಂಗಳೂರು, ಆ. 2: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬುಧವಾರ ಮಂಗಳೂರಿನಲ್ಲಿ ಹಾಗೂ ಗುರುವಾರ ಬಂಟ್ವಾಳ ಮತ್ತು ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಲ್ಲಿ ಮಿಂಚಿನ ತಪಾಸಣೆ ನಡೆಸಿದರು.

ಬಸ್ ನಿರ್ವಾಹಕರು ತಮ್ಮ ಇಲೆಕ್ಟ್ರಾನಿಕ್ ಟಿಕೆಟ್ ಮೆಶಿನ್‌ನ್ನು ಬಸ್ ನಿಲ್ದಾಣದಲ್ಲಿ ಹಸ್ತಾಂತರಿಸುವ ಸಂದರ್ಭದಲ್ಲಿ ಅಲ್ಲಿನ ಅಧಿಕಾರಿಗಳು ನಿರ್ವಾಹಕರಿಂದ 10 ರೂ. ವಸೂಲು ಮಾಡುತ್ತಿದ್ದಾರೆ ಎಂಬುದಾಗಿ ಬಂದ ದೂರಿನ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ತಪಾಸಣೆ ನಡೆಸಿದರು.

ತಪಾಸಣೆಯ ಸಂದರ್ಭದಲ್ಲಿ ಮೂರೂ ನಿಲ್ದಾಣಗಳಲ್ಲಿ ಯಾವುದೇ ಅವ್ಯವಹಾರ ಪತ್ತೆಯಾಗಿಲ್ಲ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News