×
Ad

ಆ.4: ‘ಕೆಸರ ಕಂಡೊಡೊಂಜಿ ದಿನ’

Update: 2018-08-02 22:36 IST

ಉಡುಪಿ, ಆ.2: ಮಣಿಪಾಲದ ಮಾಧವ ಪೈ ಸ್ಮಾರಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಕಲಾಕಿರಣ ಕ್ಲಬ್ ಬೈಲೂರು ಮತ್ತು ಉಡುಪಿ ಜಿಲ್ಲಾ ಕೃಷಿಕ ಸಂಘಗಳ ಆಯೋಜನೆಯಲ್ಲಿ ಆ.4ರ ಶನಿವಾರ ಬೆಳಗ್ಗೆ 9:30ಕ್ಕೆ ಉಡುಪಿ ಬೈಲೂರು ಶ್ರೀ ಮಹಿಷಾಮರ್ಧಿನಿ ಶಾಲಾ ಬಳಿ ಇರುವ ಪ್ರಗತಿಪರ ಕೃಷಿಕ ಬೈಲೂರು ಶ್ರೀನಿವಾಸ ಆಚಾರ್ಯರ ಗದ್ದೆಯಲ್ಲಿ ‘ಕೆಸರ ಕಂಡೊಡೊಂಜಿ ದಿನ’ ನೇಜಿ ನಾಟಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮವನ್ನು ಮಾಧವ ಪೈ ಸ್ಮಾರಕ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ದಯಾನಂದ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಟಿ.ರಾಧಿಕಾ ಪೈ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ವಾಲು ರಾಘವೇಂದ್ರ ಪ್ರು, ಕಲಾಕಿರಣ ಕ್ಲಬ್‌ನ ಸುರೇಶ್ ಬಂಗೇರಾ, ದಿವಾಕರ ಸನಿಲ್, ಸಮಾಜ ಸೇವಕ ವೆಂಕಟೇಶ ಪ್ರಭು, ನಿವೃತ್ತ ತೆರಿಗೆ ಆಯುಕ್ತ ಸುಭಾಸ್ ಕೆ., ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಕುದಿ ಶ್ರೀನಿವಾಸ ಭಟ್ ಮೊದಲಾ ದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News