×
Ad

ಅಲ್ಪಸಂಖ್ಯಾತರಿಗೆ ಸಿಗುವ ಸರಕಾರಿ ಸವಲತ್ತು: ಜಿಲ್ಲಾ ಮಾಹಿತಿ ಕಾರ್ಯಾಗಾರ

Update: 2018-08-02 22:38 IST

ಉಡುಪಿ, ಆ.2: ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ, ಅಲ್ಪಸಂಖ್ಯಾತರ ಕಲ್ಯಾಣಿ ಇಲಾಖೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ಉಡುಪಿ ಜಿಲ್ಲೆ, ಕೆಥೋಲಿಕ್ ಸಭಾ ಉಡುಪಿ, ಜಾಮಿಯ್ಯತುಲ್ ಫಲಾಹ್ ಹಾಗೂ ಮುಸ್ಲಿಂ ಒಕ್ಕೂಟಗಳ ಸಹಯೋಗದಲ್ಲಿ ಅಲ್ಪಸಂಖ್ಯಾತರಿಗೆ ಸಿಗುವ ಸರಕಾರಿ ಸವಲತ್ತುಗಳ ಕುರಿತು ಜಿಲ್ಲಾ ಮಾಹಿತಿ ಕಾರ್ಯಾಗಾರವೊಂದು ಆ.7ರಿಂದ 9ರವರೆಗೆ ಜಿಲ್ಲೆಯ ವಿವಿದೆಡೆಗಳಲ್ಲಿ ನಡೆಯಲಿದೆ.

ಆ.7ರ ಮಂಗಳವಾರ ಬೆಳಗ್ಗೆ 10 ಕ್ಕೆ ಬ್ರಹ್ಮಾವರದ ಹಂದಾಡಿ ಗ್ರಾಪಂ ಸಭಾಂಗಣ, ಅಪರಾಹ್ನ 2:00ಕ್ಕೆ ಉಡುಪಿಯ ಶೋಕಮಾತಾ ಇಗರ್ಜಿಯ ಡಾನ್‌ಬೋಸ್ಕೊ ಹಾಲ್, ಆ.8ರ ಬುಧವಾರ ಬೆಳಗ್ಗೆ 10 ಕ್ಕೆ ಬೈಂದೂರಿನ ಬಸ್‌ನಿಲ್ದಾಣದ ಬಳಿ ಇರುವ ಅಂಬೇಡ್ಕರ್ ಭವನ, ಅಪರಾಹ್ನ 2 ಕ್ಕೆ ಕುಂದಾಪುರ ಬಸ್‌ನಿಲ್ದಾಣದ ಬಳಿ ಇರುವ ಜಾಮೀಯ ಮಸೀದಿ ಹಾಲ್, ಆ.9ರ ಗುರುವಾರ ಬೆಳಗ್ಗೆ 10 ಕ್ಕೆ ಕಾರ್ಕಳ ತಾಲೂಕು ಕಚೇರಿ ಬಳಿ ಇರುವ ಮದೀನ ಮಸೀದಿ ಹಾಲ್, ಅಪರಾಹ್ನ 2 ಕ್ಕೆ ಕಾಪು ಪೊಲಿಪು ಜಾಮೀಯ ಮಸೀದಿ ಮದರಸ ಹಾಲ್‌ನಲ್ಲಿ ಈ ಕಾರ್ಯಾಗಾರಗಳು ನಡೆಯಲಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News