ಅಪಘಾತ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Update: 2018-08-02 23:26 IST
ಮಂಗಳೂರು, ಆ.2: 2011ರಲ್ಲಿ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಯನ್ನು ಸಂಚಾರ ಠಾಣಾ ಪೊಲೀಸರು ಪಡೀಲ್ ಬಳಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸಾಬೂ ಜೋಸೆಫ್ (59) ಎಂದು ಗುರುತಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆ.14ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಸಂಚಾರ ಠಾಣೆಯ ಪ್ರಭಾರ ಎಎಸ್ಸೈ ನಾಗೇಶ್ ಹಾಗೂ ಸಿಬ್ಬಂದಿ ವೇಣುಗೋಪಾಲ್ ಮತ್ತು ಅಮರನಾಥ ರೈ ಭಾಗವಹಿಸಿದ್ದರು.