ಪಾಕ್: 12 ಶಾಲೆಗಳನ್ನು ಸುಟ್ಟು ಹಾಕಿದ ಉಗ್ರರು

Update: 2018-08-03 15:52 GMT

ಕರಾಚಿ,ಆ.3: ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ತಾನ್‌ನಲ್ಲಿ ಭಯೋತ್ಪಾದಕರು ನಡೆಸಿದ ಸಂಘಟಿತ ಕಾರ್ಯಾಚರಣೆಯೊಂದರಲ್ಲಿ 12 ಶಾಲೆಗಳನ್ನು ಸುಟ್ಟು ಹಾಕಿದ್ದಾರೆ. ಈ ಪೈಕಿ ಅರ್ಧದಷ್ಟು ಬಾಲಕಿಯರಿಗಾಗಿಯೇ ಇರುವ ಶಾಲೆಗಳು.

ಇದರ ವಿರುದ್ಧ ಸಿಡಿದೆದ್ದಿರುವ ಸ್ಥಳೀಯರು ಪ್ರತಿಭಟನೆಗಳನ್ನು ನಡೆಸಿದ್ದಾರೆ ಹಾಗೂ ಭಯೋತ್ಪಾದಕರಿಂದ ಪದೇ ಪದೇ ದಾಳಿಗೊಳಗಾಗುವ ಶೈಕ್ಷಣಿಕ ಸಂಸ್ಥೆಗಳಿಗೆ ಭದ್ರತೆ ನೀಡುವಂತೆ ಅವರು ಆಗ್ರಹಿಸಿದ್ದಾರೆ.

ಗಿಲ್ಗಿಟ್‌ನಿಂದ ಸುಮಾರು 130 ಕಿ.ಮೀ. ದೂರದಲ್ಲಿರುವ ಚಿಲಾಸ್ ಪಟ್ಟಣದ ಶಾಲೆಗಳಿಗೆ ಉಗ್ರಗಾಮಿಗಳು ಗುರುವಾರ ತಡ ರಾತ್ರಿ ಬೆಂಕಿ ಕೊಟ್ಟಿದ್ದಾರೆ ಹಾಗೂ ಡಿಯಾಮಿರ್ ಜಿಲ್ಲೆಯಾದ್ಯಂತವಿರುವ ಶಾಲಾ ಸೊತ್ತುಗಳಿಗೆ ಹಾನಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News