ಭಾರತ ಮೂಲದ ಸಂಸದ ಕೀತ್ ವಾಝ್‌ರಿಂದ ಕಿರುಕುಳ: ಬ್ರಿಟನ್ ಸಂಸತ್ ಗುಮಾಸ್ತೆ ಆರೋಪ

Update: 2018-08-03 17:18 GMT

ಲಂಡನ್, ಆ. 3: ಭಾರತ ಮೂಲದ ಬ್ರಿಟಿಶ್ ಸಂಸದ ಕೀತ್ ವಾಝ್ ತನಗೆ ಕಿರುಕುಳ ನೀಡುತ್ತಿದ್ದರು ಎಂಬುದಾಗಿ ಬ್ರಿಟಿಶ್ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನ ಮಾಜಿ ಗುಮಾಸ್ತೆಯೊಬ್ಬರು ಆರೋಪಿಸಿದ್ದಾರೆ.

ಆದರೆ, ಈ ಆರೋಪಗಳನ್ನು ಸಂಸದರು ನಿರಾಕರಿಸಿದ್ದಾರೆ.

ಜೆನ್ನಿ ಮೆಕ್‌ಕಲೋ ಗೃಹ ವ್ಯವಹಾರಗಳ ಸಮಿತಿಯ ಗುಮಾಸ್ತೆಯಾಗಿ ಕೆಲಸ ಮಾಡುತ್ತಿದ್ದರು. ವಾಝ್ 2008ರಲ್ಲಿ ಈ ಸಮಿತಿಯ ಅಧ್ಯಕ್ಷರಾಗಿದ್ದರು.

ವಾಝ್ ತನಗೆ ಬಯ್ಯುತ್ತಿದ್ದರು ಹಾಗೂ ತಾನೋರ್ವ ‘ತಾಯಿ ಅಲ್ಲದಿರುವುದರಿಂದ’ ತಾನು ಕೆಲಸದಲ್ಲಿ ಕಳಪೆಯಾಗಿದ್ದೇನೆ ಎಂದು ಹೇಳುತ್ತಿದ್ದರು ಎಂದು ಬಿಬಿಸಿಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

ಸರಕಾರದ ವೆಚ್ಚದಲ್ಲಿ ಅವರು ಕೈಗೊಂಡ ರಶ್ಯ ಪ್ರವಾಸದ ವೇಳೆ ಅವರ ವರ್ತನೆಯನ್ನು ತಾನು ಪ್ರಶ್ನಿಸಿದ ಬಳಿಕ ಅವರು ಕಿರುಕುಳ ಕೊಡಲು ಆರಂಭಿಸಿದರು ಎಂದು ಜೆನ್ನಿ ಆರೋಪಿಸಿದ್ದಾರೆ.

ಈ ಆರೋಪಗಳನ್ನು ಈ ಹಿಂದೆ ಎಂದೂ ಕೀತ್ ವಾಝ್‌ರ ಗಮನಕ್ಕೆ ತರಲಾಗಿಲ್ಲ ಎಂದು ವಾಝ್‌ರ ಪ್ರತಿನಿಧಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News