ವದಂತಿ, ಸುಳ್ಳು ಸುದ್ದಿ ತಡೆಗೆ 700 ಯುಆರ್‌ಎಲ್‌ಗೆ ಪ್ರತಿಬಂಧ: ರವಿಶಂಕರ್ ಪ್ರಸಾದ್

Update: 2018-08-04 05:51 GMT

ಹೊಸದಿಲ್ಲಿ, ಆ. 3: ವದಂತಿ ಹಾಗೂ ಸುಳ್ಳು ಸುದ್ದಿಗಳು ನುಸುಳದಿರಲು ಈ ವರ್ಷ ಪೇಸ್‌ಬುಕ್ ಹಾಗೂ ಟ್ವಿಟ್ಟರ್‌ನಂತಹ ಸಾಮಾಜಿಕ ಮಾದ್ಯಮದ ವೇದಿಕೆಗಳು 700 ಯುನಿಫಾರ್ಮ್ ರಿಸೋರ್ಸ್ ಲೋಕೇಟರ್ (ಯುಆರ್‌ಎಲ್)ಗಳನ್ನು ಪ್ರತಿಬಂಧಿಸಿದೆ ಎಂದು ಸರಕಾರ ಶುಕ್ರವಾರ ತಿಳಿಸಿದೆ.

ರಾಜ್ಯ ಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ಸಮಾಜಿಕ ಮಾದ್ಯಮ ಕಂಪೆನಿಗಳ ಉತ್ತರದಾಯಿತ್ವದ ಮೇಲೆ ಸರಕಾರ ಹೆಚ್ಚು ಒತ್ತಡ ಹೇರಿದೆ ಎಂದರು. ಈ ಹಿಂದಿನ ಮಾಹಿತಿ ಹಾಗೂ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಈ ಕಂಪೆನಿಗಳು ಹಲವು ಯುಆರ್‌ಎಲ್‌ಗಳನ್ನು ಪ್ರತಿಬಂಧಿಸಿವೆ ಎಂದು ಅವರು ಹೇಳಿದರು. ಈ ವರ್ಷ ಜೂನ್ ವರೆಗೆ ಫೇಸ್‌ಬುಕ್ 499, ಯುಟ್ಯೂಬ್ 57, ಟ್ವಿಟ್ಟರ್ 88, ಇನ್‌ಸ್ಟಾಗ್ರಾಮ್ 25 ಹಾಗೂ ಟಂಬ್ಲರ್ 28 ಯುಆರ್‌ಎಲ್‌ಗಳನ್ನು ಪ್ರತಿಬಂಧಿಸಿವೆ ಎಂದು ರವಿಶಂಕರ್ ಪ್ರಸಾದ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News