ನೈರುತ್ಯ ಏಶ್ಯಕ್ಕೆ 300 ಮಿಲಿಯ ಡಾಲರ್ ಭದ್ರತಾ ನಿಧಿ: ಅಮೆರಿಕ ಘೋಷಣೆ

Update: 2018-08-04 14:34 GMT

ಸಿಂಗಾಪುರ, ಆ. 4: ನೈರುತ್ಯ ಏಶ್ಯಕ್ಕೆ ಭದ್ರತಾ ನಿಧಿಯಾಗಿ 300 ಮಿಲಿಯ ಡಾಲರ್ (ಸುಮಾರು 2055 ಕೋಟಿ ರೂಪಾಯಿ) ನೀಡುವುದಾಗಿ ಅಮೆರಿಕ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಶನಿವಾರ ಘೋಷಿಸಿದ್ದಾರೆ.

ಈ ವಲಯದಲ್ಲಿ ತನ್ನ ಚಟುವಟಿಕೆಗಳನ್ನು ಹೆಚ್ಚಿಸಲು ಚೀನಾ ಯೋಜನೆಗಳನ್ನು ರೂಪಿಸುತ್ತಿರುವಂತೆಯೇ, ಅದಕ್ಕೆ ಪ್ರತಿಯಾಗಿ ಅಮೆರಿಕ ಈ ಕ್ರಮ ತೆಗೆದುಕೊಂಡಿದೆ.

ಸಿಂಗಾಪುರದಲ್ಲಿ ನಡೆಯುತ್ತಿರುವ ಅಸೋಸಿಯೇಶನ್ ಆಫ್ ಸೌತ್‌ಈಸ್ಟ್ ಏಶ್ಯನ್ ನೇಶನ್ಸ್ (ಆಸಿಯಾನ್)ನ 10 ಸದಸ್ಯ ದೇಶಗಳ ವಿದೇಶ ಸಚಿವರು ಮತ್ತು ಇತರ ದೇಶಗಳ ಪ್ರತಿನಿಧಿಗಳ ಸಭೆಯ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಂಪಿಯೊ ಈ ಘೋಷಣೆಯನ್ನು ಮಾಡಿದರು.

‘‘ಭಾರತ-ಪೆಸಿಫಿಕ್ ವಲಯದ ಪ್ರಾದೇಶಿಕ ಭದ್ರತೆಯನ್ನು ಸುಧಾರಿಸುವ ನಮ್ಮ ಬದ್ಧತೆಯ ಭಾಗವಾಗಿ, ಈ ಇಡೀ ವಲಯದ ಭದ್ರತಾ ಸಹಕಾರವನ್ನು ಬಲಗೊಳಿಸಲು 300 ಮಿಲಿಯ ಡಾಲರ್ ಮೊತ್ತದ ಹೊಸ ನಿಧಿಯನ್ನು ಘೋಷಿಸಲು ಅಮೆರಿಕ ಉತ್ಸುಕವಾಗಿದೆ’’ ಎಂದು ಅವರು ಹೇಳಿದರು.

ನೂತನ ಭದ್ರತಾ ನಿಧಿಯು ಸಾಗರತೀರ ಭದ್ರತೆಯನ್ನು ಬಲಪಡಿಸುತ್ತದೆ, ಮಾನವೀಯ ನೆರವು ಮತ್ತು ಶಾಂತಿಪಾಲನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಹಾಗೂ ಹೊರದೇಶಗಳ ಬೆದರಿಕೆಗಳನ್ನು ಎದುರಿಸುತ್ತದೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News