ಹುದೈದಾ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದು ಹೌದಿ ಬಂಡುಕೋರರು: ಸೌದಿ ನೇತೃತ್ವದ ಮಿತ್ರಕೂಟ

Update: 2018-08-04 14:41 GMT

ರಿಯಾದ್, ಆ. 4: ಯಮನ್‌ನ ಬಂದರು ನಗರ ಹುದೈದಾದ ಆಸ್ಪತ್ರೆ ಮತ್ತು ಮೀನು ಮಾರುಕಟ್ಟೆಯೊಂದರ ಮೇಲೆ ಹೌದಿ ಬಂಡುಕೋರರು ನಡೆಸಿದ ದಾಳಿಯಲ್ಲಿ ಡಝನ್‌ಗಟ್ಟಳೆ ಮಂದಿ ಸಾವನ್ನಪ್ಪಿದ್ದಾರೆ ಎಂದು ಸೌದಿ ಅರೇಬಿಯ ನೇತೃತ್ವದ ಮಿತ್ರಕೂಟ ಶುಕ್ರವಾರ ಆರೋಪಿಸಿದೆ.

ಹುದೈದಾ ಬಂದರಿನಲ್ಲಿರುವ ಈ ಎರಡು ಸ್ಥಳಗಳನ್ನು ಗುರಿಯಾಗಿಸಿ ಇರಾನ್ ಬೆಂಬಲಿತ ಬಂಡುಕೋರರು ಗುರುವಾರ ದಾಳಿ ನಡೆಸಿದ್ದಾರೆ ಎಂದು ಮಿತ್ರಕೂಟದ ವಕ್ತಾರ ಕರ್ನಲ್ ತುರ್ಕಿ ಅಲ್-ಮಾಲಿಕಿ ಹೇಳಿದರು.

ಆದರೆ, ಅರಬ್ ಮಿತ್ರಕೂಟವು ಆಸ್ಪತ್ರೆಯ ಮೇಲೆ ವಾಯು ದಾಳಿ ನಡೆಸಿದೆ ಎಂಬುದಾಗಿ ಹೌದಿ ಪರ ಮಾಧ್ಯಮಗಳು ಆರೋಪಿಸಿವೆ.

ಆದರೆ, ಈ ಆರೋಪಗಳನ್ನು ನಿರಾಕರಿಸಿದ ಮಾಲಿಕಿ, ದಾಳಿಯಲ್ಲಿ ಹೌದಿ ಬಂಡುಕೋರರು ಉಡಾಯಿಸಿದ ಮೋರ್ಟರ್‌ಗಳದ್ದೆನ್ನಲಾದ ಚಿತ್ರಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News