×
Ad

ಉಡುಪಿ: ಎಸಿಬಿಯಿಂದ ಮಾಹಿತಿ ಕಾರ್ಯಗಾರ

Update: 2018-08-04 20:31 IST

ಉಡುಪಿ, ಜು.21: ಉಡುಪಿಯ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆ ವತಿಯಿಂದ ಕೋಟೇಶ್ವರ ಗ್ರಾಪಂ ಸಭಾಭವನದಲ್ಲಿ ಭ್ರಷ್ಟಾಚಾರ ನಿರ್ಮೂಲನಾ ಮಾಹಿತಿ ಕಾರ್ಯಾಗಾರ ಹಾಗೂ ಜನಸಂಪರ್ಕ ಸಭೆ ನಿನ್ನೆ ನಡೆಯಿತು.

ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ಉಪಾಧೀಕ್ಷಕ ದಿನಕರ ಶೆಟ್ಟಿ ಅವರು ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿ ಭ್ರಷ್ಟಾಚಾರ ಪಿಡುಗು ಹಾಗೂ ಅದರ ನಿರ್ಮೂಲನೆ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕರು ಭ್ರಷ್ಟಾಚಾರದ ಬಗ್ಗೆ ಜಾಗ್ರತರಾಗಿ ಭ್ರಷ್ಟಾಚಾರಿಗಳ ವಿರುಧ್ದ ದೂರು ನೀಡಿ ಅವರನ್ನು ಕಾನೂನಿನ ಕುಣಿಕೆಗೆ ಒಳಪಡಿಸುವವರೆಗೆ ಭ್ರಷ್ಟಾಚಾರ ತಡೆಗಟ್ಟಲು ಅಸಾಧ್ಯ. ಆದ್ದರಿಂದ ಭ್ರಷ್ಟಾಚಾರ ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು.

ಮಾವಿನಕಟ್ಟೆ: ಉಡುಪಿಯ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ವತಿಯಿಂದ ಮಾವಿನಕಟ್ಟೆ ಶಾದಿಮಹಲ್ ಹಾಲ್‌ನಲ್ಲಿ ಭ್ರಷ್ಟಾಚಾರ ನಿರ್ಮೂಲನಾ ಮಾಹಿತಿ ಕಾರ್ಯಾಗಾರ ಹಾಗೂ ಜನಸಂಪರ್ಕ ಸಭೆ ನಡೆಯಿತು.

ಕಾರ್ಯಾಗಾರವನ್ನುದ್ದೇಶಿಸಿ ಮಂಗಳೂರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧೀಕ್ಷಕಿ ಶ್ರುತಿ ಎನ್.ಎಸ್, ಉಡುಪಿ ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ಉಪಾಧೀಕ್ಷಕ ದಿನಕರ ಶೆಟ್ಟಿ ಹಾಗೂ ಉಡುಪಿ ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ನಿರೀಕ್ಷಕ ಜಯರಾಮ ಡಿ ಗೌಡ ಮಾತನಾಡಿದರು.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜಾನಾಧಿಕಾರಿ ಶಶಿರೇಖಾ, ಗ್ರಾಮಸ್ಥ ಚೆರಿಯಬ್ಬ ಸಾಹೇಬ್ ಹಾಗೂಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News