×
Ad

ಮಾರಿಷಸ್: ವಿಶ್ವ ಹಿಂದಿ ಸಮ್ಮೇಳನಕ್ಕೆ ಮಾಧವಿ ಭಂಡಾರಿ, ಸಿದ್ದಲಿಂಗ ಪಟ್ಟಣಶೆಟ್ಟಿ

Update: 2018-08-04 21:16 IST
ಮಾಧವಿ ಭಂಡಾರಿ, ಸಿದ್ದಲಿಂಗ ಪಟ್ಟಣಶೆಟ್ಟಿ

ಉಡುಪಿ, ಆ.4: ಮಾರಿಷಸ್‌ನಲ್ಲಿ ಆ.18ರಿಂದ 20ರವರೆಗೆ ನಡೆಯಲಿರುವ 11ನೇ ವಿಶ್ವ ಹಿಂದಿ ಸಮ್ಮೇಳನದಲ್ಲಿ ಭಾಗವಹಿಸುವ ನಿಯೋಗದಲ್ಲಿ ಉಡುಪಿಯ ಡಾ. ಮಾಧವಿ ಎಸ್. ಭಂಡಾರಿ ಹಾಗೂ ಧಾರವಾಡದ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ.

ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಯೋಗದ ನೇತೃತ್ವ ವಹಿಸಲಿದ್ದಾರೆ. ಭಾರತ ವಿದೇಶಾಂಗ ಸಚಿವಾಲಯ ಹಾಗೂ ಮಾರಿಷಸ್ ಸರಕಾರದ ಸಹಭಾಗಿತ್ವದಲ್ಲಿ ಮಾರಿಷಸ್‌ನ ಸ್ವಾಮೀ ವಿವೇಕಾನಂದ ಇಂಟರ್ ನ್ಯಾಶನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ಚರ್ಚಿಸಲ್ಪಡುವ ಈ ಬಾರಿಯ ಮುಖ್ಯ ವಿಷಯ ‘ವೈಶ್ವಿಕ್ ಹಿಂದಿ ಔರ್ ಭಾರತೀಯ ಸಂಸ್ಕೃತಿ’ ಆಗಿದೆ.

ನಿಯೋಗ ಆ.16ರ ರಾತ್ರಿ ಹೊಸದಿಲ್ಲಿಯಿಂದ ಹೊರಟು 18ರ ಮುಂಜಾನೆ ಮಾರಿಷಸ್ ತಲುಪಲಿದ್ದು, ಆ.21ರಂದು ಅಲ್ಲಿಂದ ಹಿಂದಿರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News