ವಿದ್ಯಾರ್ಥಿ ತಂಡದಿಂದ ಹೊಡೆದಾಟ
Update: 2018-08-04 21:37 IST
ಬ್ರಹ್ಮಾವರ, ಆ.4: ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನ ಬಳಿ ಆ. 3ರಂದು ಮಧ್ಯಾಹ್ನ ವೇಳೆ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದ ಎರಡು ವಿದ್ಯಾರ್ಥಿ ತಂಡಗಳ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲೇಜಿನ ಎದುರುಗಡೆ ಕಾಲೇಜಿನ ಪದವಿ ವಿದ್ಯಾರ್ಥಿಗಳಾದ ಶಿಶಿರ್ ಕೆ., ರಂಜಿತ್, ಶಂಮತ್, ಗೌತಮ್ ಮತ್ತು ಕಾರ್ತಿಕ, ನಂದನ್, ಆಶ್ರಯ, ವಿನಿತ್, ಸೌರಭ್, ಪ್ರದೀಪ್ ಎಂಬವರು ಎರಡು ತಂಡಗಳಾಗಿ ಪರಸ್ಪರ ಹೊಡೆದಾಡಿ ಕೊಂಡು ಕಲಹ ನೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.