×
Ad

ಎಸ್ಸೆಸ್ಸೆಫ್ ಬ್ರಹ್ಮಾವರ ಸೆಕ್ಟರ್‌ನಿಂದ ಜಾಗೃತಿ ಅಭಿಯಾನ

Update: 2018-08-04 22:33 IST

ಬ್ರಹ್ಮಾವರ, ಆ.4: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ರಾಜ್ಯ ದಾದ್ಯಂತ ಹಮ್ಮಿಕೊಂಡಿರುವ ಸೆಕ್ಟರ್ ಮಟ್ಟದ ‘ನಮ್ಮ ಮಕ್ಕಳು ನಮ್ಮವರಾಗಲು’ ಎಂಬ ಜಾಗೃತಿ ಅಭಿಯಾನವು ಇತ್ತೀಚೆಗೆ ಬ್ರಹ್ಮಾವರ ಸೆಕ್ಟರ್ ವತಿಯಿಂದ ಜರಗಿತು.

ಹೊನ್ನಾಳದ ದರ್ಗಾ ಶರೀಫ್‌ನಿಂದ ಹೊರಟ ಜಾಥವು ಗಾಂಧಿನಗರ ಬೈಕಾಡಿ, ಭದ್ರಗಿರಿ, ಸಾಸ್ತಾನ, ರಂಗನಕೆರೆ ಬಾರ್ಕೂರು ಮಾರ್ಗವಾಗಿ ಸಾಗಿ ಬ್ರಹ್ಮಾವರ ಬಸ್ ನಿಲ್ದಾಣ ಬಳಿ ಸಮಾಪನಗೊಂಡಿತು. ಝಯಾನ್ ಭದ್ರಗಿರಿ, ಸೈಪಾಲಿ ಹೊನ್ನಾಳ, ಆರೀಪ್ ಸಾಸ್ತಾನ, ರಾಝಿ ಮತ್ತು ರಾಝಿಕ್ ರಂಗನಕೆರೆ ಬೀದಿ ಭಾಷಣ ಹಾಗು ಅಭಿಯಾನ ಹಾಡುಗಳನ್ನು ಹಾಡಿದರು.

ಸಮಾರೋಪದಲ್ಲಿ ಕನ್ನಂಗಾರ್ ಮುಹಿಸುನ್ನ ದರ್ಸ್ ವಿದ್ಯಾರ್ಥಿ ಮಹಮ್ಮದ್ ಶರೀಫ್, ಉಡುಪಿ ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ಕೆ.ಪಿ ಇಬ್ರಾಹಿಂ ಮಟಪಾಡಿ ಮಾತನಾಡಿದರು. ಉಡುಪಿ ಡಿವಿಷನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಸಹದಿ ದೊಡ್ಡಣಗುಡ್ಡೆ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಉಡುಪಿ ಡಿವಿಷನ್ ಕಾರ್ಯದರ್ಶಿ ನಝೀರ್ ಸಾಸ್ತಾನ, ಕೋಶಾಧಿಕಾರಿ ಇಬ್ರಾಹಿಂ ರಂಗನಕೆರೆ, ಕಾರ್ಯದರ್ಶಿ ಶಾಹುಲ್ ದೊಡ್ಡಣ ಗುಡ್ಡೆ, ಗೌರವ ಸಲಹೆಗಾರ ಸಮದ್ ಉಸ್ತಾದ್, ಹೊನ್ನಾಳ ಶಾಖಾಧ್ಯಕ್ಷ ಸುಹೈಬ್, ಜಿಲ್ಲಾ ಸದಸ್ಯ ಶಂಶುದ್ದೀನ್, ಸೆಕ್ಟರ್ ಕೋಶಾಧಿಕಾರಿ ಸುಲೈಮಾನ್ ರಂಗನಕೆರೆ, ಜೊತೆ ಕಾರ್ಯದರ್ಶಿ ಅಶ್ರಫ್ ಗಾಂಧಿನಗರ, ಕ್ಯಾಂಪಸ್ ಕಾರ್ಯ ದರ್ಶಿ ಸೈಪಾಲಿ ಹೊನ್ನಾಳ, ಸಾಸ್ತಾನ ರಝಾಕ್, ಬಾಲ ಸಂಘ ಅಧ್ಯಕ್ಷ ತೌಪೀಕ್ ಬೈಕಾಡಿ, ಸಿನಾನ್, ಮುತ್ತಲಿಬ್, ಹನೀಫ್ ಮೊದಲಾದವರು ಹಾಜರಿದ್ದರು.

ಸೆಕ್ಟರ್ ಕಾರ್ಯದರ್ಶಿ ನಾಸೀರ್ ಭದ್ರಗಿರಿ ಸ್ವಾಗತಿಸಿದರು. ಸೆಕ್ಟರ್ ಅಧ್ಯಕ್ಷ ಇಮ್ತಿಯಾಝ್ ಹೊನ್ನಾಳ ವಂದಿಸಿದರು. ಗೌರವ ಸಲಹೆಗಾರ ಸುಬು ಹಾನ್ ಅಮದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News