ಬ್ಯಾರಿ ಪ್ರಬಂಧ ಮತ್ತು ಕಥಾ ಸ್ಪರ್ಧೆಗೆ ಆಹ್ವಾನ

Update: 2018-08-04 17:19 GMT

ಮಂಗಳೂರು, ಆ.4: ವಿದ್ಯಾರ್ಥಿಗಳಲ್ಲಿ ಸಾಹಿತ್ಯಿಕ ಅಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ಬ್ಯಾರಿ ಸಾಹಿತ್ಯ ಅಕಾಡಮಿಯು ಕಾಲೇಜು ವಿದ್ಯಾರ್ಥಿಗಳಿಗೆ ಬ್ಯಾರಿ ಭಾಷೆಯಲ್ಲಿ ಪ್ರಬಂಧ ಮತ್ತು ಕಥಾ ಸ್ಪರ್ಧೆಯನ್ನು ಆಯೋಜಿಸಿದೆ. ‘ಬ್ಯಾರಿ ಸಂಸ್ಕೃತಿಯ ವೈಶಿಷ್ಟಗಳು’ ಎಂಬ ವಿಷಯದ ಬಗ್ಗೆ ಪ್ರಬಂಧ ಬರೆಯಬಹುದು.

ಕಥೆ/ಪ್ರಬಂಧಗಳನ್ನು ಫುಲ್‌ಸ್ಕೇಪ್ ಹಾಳೆಯ ಒಂದೇ ಮಗ್ಗುಲಲ್ಲಿ ಬರೆದಿರಬೇಕು. ಗರಿಷ್ಠ ಮೂರು ಪುಠಗಳ ಮಿತಿಯಲ್ಲಿರಬೇಕು. ಲೇಖನಗಳು ಸ್ವತಂತ್ರ ಬರವಣಿಗೆಯಾಗಿರಬೇಕು. ಆಸಕ್ತರು ಹೆಸರು, ಸಂಪರ್ಕ ಸಂಖ್ಯೆ, ತರಗತಿ, ಕಾಲೇಜು ವಿಳಾಸ, ಹಾಗೂ ಕಾಲೇಜಿನ ಪ್ರಿನ್ಸಿಪಾಲರ ದೃಢೀಕರಣ ಪತ್ರದೊಂದಿಗೆ ಆ.30ರೊಳಗೆ ರಿಜಿಸ್ಟ್ರಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ಹ್ಯಾಮಿಲ್ಟನ್ ಕಾಂಪ್ಲೆಕ್ಸ್ ಸ್ಟೇಟ್‌ಬ್ಯಾಂಕ್, ಮಂಗಳೂರು 575001 ಇಲ್ಲಿಗೆ ಕಳುಹಿಸಿಕೊಡಬಹುದು.

ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನಗಳನ್ನು ಕೊಡಲಾಗುವುದು ಹಾಗೂ ಆ ಬರಹಗಳನ್ನು ಅಕಾಡಮಿಯ ‘ಬೆಲ್ಕಿರಿ’ ದ್ವೈಮಾಸಿಕದಲ್ಲಿ ಪ್ರಕಟಿಸಲಾಗುವುದು ಎಂದು ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News