ಮೊಂಟೆಪದವು: ಎಸ್ಸೆಸ್ಸೆಫ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಬಂಟ್ವಾಳ, ಆ. 5: ಎಸ್ಸೆಸ್ಸೆಫ್ ಮರಿಕ್ಕಳ ಶಾಖೆ ವತಿಯಿಂದ ಯೆನೆಪೊಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಹಾಗೂ ಯೆನೆಪೊಯ ಹೋಮಿಯೋಪತಿ-ಆಯುರ್ವೇದಿಕ್ ಆಸ್ಪತ್ರೆ ನರಿಂಗಾನ ಇದರ ಸಹಭಾಗಿತ್ವದಲ್ಲಿ ತಾಜುಲ್ ಉಲಮಾ ಉಚಿತ ಆರೋಗ್ಯ ತಪಾಸಣಾ ಶಿಬಿರವು ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಅಧ್ಯಕ್ಷತೆಯಲ್ಲಿ ಜಿಪಂ ಹಿರಿಯ ಪ್ರಾಥಮಿಕ ಶಾಲೆ ನರಿಂಗಾನ ಮೊಂಟೆಪದವುವಿನಲ್ಲಿ ರವಿವಾರ ನಡೆಯಿತು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಮೊಂಟೆಪದವು ಹೈಸ್ಕೂಲ್ ಮುಖ್ಯೋಪಾಧ್ಯಾಯ ಸಂತೋಷ್, ಪ್ರೈಮರಿ ಮುಖ್ಯೋಪಾಧ್ಯಾಯ ವಸಂತ ಕೋಡಿ, ಮೋಂಟುಗೋಳಿ ಸೆಕ್ಟರ್ ಅಧ್ಯಕ್ಷ ಇರ್ಷಾದ್ ಮದನಿ ಮೊಂಟೆಪದವು, ಮರಿಕ್ಕಳ ಶಾಖಾಧ್ಯಕ್ಷ ಮನ್ಸೂರು ಹಿಮಮಿ ಈ ಸಂದರ್ಭ ಮಾತನಾಡಿದರು.
ಕಾರ್ಯಕ್ರಮದಲ್ಲಿ ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ ಮೀನಂಗೋಡಿ, ಮುರಳೀದರ ಶೆಟ್ಟಿ, ಎಸ್.ಎಂ ಮುಹಮ್ಮದ್, ಫಯಾಝ್ ಮೊಂಟೆಪದವು, ಆಲಿಕುಂಞಿ ಅಗಲ್ತಬೆಟ್ಟು, ಚಂದ್ರಶೇಖರ ಶೆಟ್ಟಿ ಮರಿಕ್ಕಳ, ಪಿಲಿಫ್ ಡಿಸೋಜ, ಗೋಪಾಲ ಭಟ್ ಉಪಸ್ಥಿತರಿದ್ದರು. ಅಬ್ದುಲ್ ರಹಿಮಾನ್ ಸ್ವಾಗತಿಸಿದರು, ಮರಿಕ್ಕಳ ಶಾಖೆ ಪ್ರಧಾನ ಕಾರ್ಯದರ್ಶಿ ಅಝರ್ ಅಗಲ್ತಬೆಟ್ಟು ವಂದಿಸಿದರು.