×
Ad

ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಭಟ್ಕಳದ ಅಬ್ದುಲ್ ಬಾಯಿಸ್ ಗೆ ಆರು ಚಿನ್ನ

Update: 2018-08-05 17:58 IST

ಭಟ್ಕಳ, ಆ. 5: ಭಟ್ಕಳದ ಹುಡುಗನೊಬ್ಬ ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಆರು ಚಿನ್ನದ ಪದಕ ಗಳಿಸುವುದರ ಮೂಲಕ ಭಟ್ಕಳಕ್ಕೆ ಚಿನ್ನದ ಇತಿಹಾಸ ಬರೆದಿದ್ದಾನೆ.

ಮೇ ತಿಂಗಳಲ್ಲಿ ಜರಗಿದ ಬಿಇ ಕೆಮಿಕಲ್ ಇಂಜಿನಿಯರಿಂಗ್ ಅಂತಿಮ ಪರೀಕ್ಷೆಯಲ್ಲಿ ತುಮಕೂರಿನ ಸಿದ್ಧಗಂಗಾ ಟೆಕ್ನೋಲಜಿ ಕಾಲೇಜಿನಲ್ಲಿ ಅಧ್ಯಾಯನ ಮಾಡುತ್ತಿರುವ ಭಟ್ಕಳದ ಅಬ್ದುಲ್ ಬಾಸಿತ್ ಕಾಡ್ಲಿ ಅವರ ಪುತ್ರ ಅಬ್ದುಲ್ ಬಾಯಿಸ್ 9.31 ಸಿಜಿಪಿಎ ಅಂಕಗಳೊಂದಿಗೆ ವಿಶೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (ವಿಟಿಯು) ಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ನಗರದ ಜಾಲಿ ರಸ್ತೆಯ ನಿವಾಸಿಯಾಗಿರುವ ಅವರು ಶನಿವಾರ ಬೆಂಗಳೂರಿನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸವನ್ನು ಇಲ್ಲಿನ ಅಂಜುಮನ್ ಸಂಸ್ಥೆಯಲ್ಲಿ ಪೂರೈಸಿದ್ದ ಇವರು 2012ರಲ್ಲಿ ಪ್ರತಿಷ್ಠಿತ ವಕಾರೆ ಇಸ್ಲಾಮಿಯಾ ಪುರಸ್ಕಾರಕ್ಕೆ ಬಾಜನರಾಗಿದ್ದ. ವಿದ್ಯಾರ್ಥಿಯ ಈ ಸಾಧನೆಗೆ ವಿವಿಧ ಸಂಘಸಂಸ್ಥೆಗಳ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News