×
Ad

ಮಲ್ಪೆ ಬಂದರಿನಲ್ಲಿ ಅಪರಿಚಿತ ಶವ ಪತ್ತೆ

Update: 2018-08-05 19:34 IST

ಮಲ್ಪೆ, ಆ.5: ಮಲ್ಪೆಬಂದರಿನಲ್ಲಿರುವ ಕರಾವಳಿ ಕಾವಲು ಪೊಲೀಸ್ ಠಾಣೆಯ ಎದುರು ಬಲೆ ಹಾಕುವ ರಾಶಿಯ ಬಳಿ 30-40 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಮೃತದೇಹ ಆ.4ರಂದು ಮಧ್ಯಾಹ್ನ ವೇಳೆ ಪತ್ತೆಯಾಗಿದೆ.

ಈ ವ್ಯಕ್ತಿಯು ಬೆಳಗ್ಗೆ ಬಂದರಿನಲ್ಲಿ ಸಂಚರಿಸಿಕೊಂಡಿದ್ದು, ಮಧ್ಯಾಹ್ನ ವೇಳೆ ಮಲಗಿದ ಸ್ಥಳದಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News