×
Ad

ಮನೆಗೆ ನುಗ್ಗಿ ಚಿನ್ನಾಭರಣ ಕಳವು

Update: 2018-08-05 19:37 IST

ಕಾರ್ಕಳ, ಆ.5: ಮುಲ್ಲಡ್ಕ ಗ್ರಾಮದ ಮುಂಡ್ಕೂರು ಎಂಬಲ್ಲಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಮುಂಡ್ಕೂರು ನಿವಾಸಿ ರಮೇಶ್ ಶೆಟ್ಟಿ ಎಂಬವರ ಪತ್ನಿ ಮನೆಗೆ ಲಾಕ್ ಮಾಡದೆ ಹತ್ತಿರದ ಗದ್ದೆಗೆ ಹೋಗಿದ್ದ ಸಮಯದಲ್ಲಿ ಈ ಕಳವು ನಡೆದಿರಬಹು ದೆಂದು ಶಂಕಿಸಲಾಗಿದೆ. ಆ.4ರಂದು ಪರಿಶೀಲಿಸಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಮನೆಯ ಒಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಕೀಯಿಂದ ಬಾಗಿಲು ತೆರೆದು ಅದರೊಳಗಿದ್ದ ಬಂಗಾರದ ನೆಕ್ಲೇಸ್, ಚಿನ್ನದ ಬಳೆ ಹಾಗೂ ಚೈನ್ನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 1,00,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News