ಆ.9ರಂದು ಬೈಂದೂರಿನಲ್ಲಿ ಜೈಲ್‌ಬರೋ ಹೋರಾಟ
Update: 2018-08-05 19:40 IST
ಕುಂದಾಪುರ, ಆ.5: ಗೋಳಿಹೊಳೆ ಹಾಗೂ ಏಳಜಿತ್ ಗ್ರಾಮಗಳ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರ ಸಭೆಯು ಇತ್ತೀಚೆಗೆ ಗೋಳಿಹೊಳೆ ಮೂರುಕೈ ಸಭಾಭವನದಲ್ಲಿ ಜರಗಿತು.
ಸಭೆಯಲ್ಲಿ ಕಾರ್ಮಿಕ ಮುಖಂಡರಾದ ಸುರೇಶ ಕಲ್ಲಾಗರ, ಗಣೇಶ ಮೊಗವೀರ, ವೆಂಕಟೇಶ ಕೋಣಿ, ಸದಾಶಿವ ಆಚಾರ್, ಮಂಜುನಾಥ ಗೌಡ ಮೊದಲಾದವರು ಹಾಜರಿದ್ದರು.
ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಪಿಂಚಣಿ 3000 ರೂ., ವೈದ್ಯಕೀಯ ಸೌಲಭ್ಯ, ಅಪಘಾತದ ಪರಿಹಾರವನ್ನು ಹೆಚ್ಚಿಸುವಂತೆ ಒತ್ತಾಯಿಸಿ ಆ.9ರಂದು ಬೆಳಗ್ಗೆ 11:30ಕ್ಕೆ ಬೈಂದೂರು ತಹಶೀಲ್ದಾರ್ ಕಛೇರಿಗೆ ಮೆರವಣಿಗೆ ತೆರಳಿ ಜೈಲ್ ಬರೋ ಹೋರಾಟ ಆಯೋಜಿಸಲಾಗಿದೆ. ಈ ಹೋರಾಟ ಬೆಂಬಲಿಸಿ ಜೈಲಿಗೆ ಹೋಗುವುದಕ್ಕೆ ಸರ್ವಾನಮತದಿಂದ ತೀರ್ಮಾನಿಸಲಾಯಿತು.