ಜಾನುವಾರುಗಳಿಗೆ ಉಚಿತ ಜಂತುಹುಳ ಔಷಧ ವಿತರಣೆ
Update: 2018-08-05 19:42 IST
ಉಡುಪಿ, ಆ.5: ಜಾನುವಾರುಗಳಿಗೆ ಜಂತುಹುಳ ಔಷಧಿ ನೀಡಿದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿ ಉತ್ತಮ ಗುಣಮಟ್ಟದ ಹಾಲು ಪಡೆಯ ಬಹುದಾಗಿದ್ದು, ಹೈನುಗಾರರು ಸಂಫಗಳು ನೀಡುವ ಉಚಿತ ಜಂತುಹುಳ ನಿವಾರಣಾ ಔಷಧಿ ನೀಡುವ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಅಲೆವೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ತಿಳಿಸಿದ್ದಾರೆ.
ಅಲೆವೂರು ಕೋಡಿಯಲ್ಲಿ ಇತ್ತೀಚೆಗೆ 70ಕ್ಕೂ ಅಧಿಕ ಹಸು ಮತ್ತು 40ಕ್ಕೂ ಅಧಿಕ ಕರುಗಳಿಗೆ ಸಂಘದ ಮೂಲಕ ಉಚಿತ ಔಷಧ ವಿತರಿಸಿ ಅವರು ಮಾತ ನಾಡುತಿದ್ದರು.
ಕೊರಂಗ್ರಪಾಡಿ ಸಿ.ಎ. ಬ್ಯಾಂಕ್ ನಿರ್ದೇಶಕ ಗೋಪಾಲ ನಾಯ್ಕ್, ಸಂಘದ ನಿರ್ದೇಶಕರುಗಳಾದ ಸ್ವಾತಿ ಪ್ರಭು, ಕೃಷ್ಣ ನಾಯ್ಕ್, ಕೃಷ್ಣ ಅಸ್ಕೇಕರ್, ಸಾಮಾಜಿಕ ಕಾರ್ಯಕರ್ತರಾದ ಜಯ ಸೇರಿಗಾರ್, ಕೃಷ್ಣ ಪೂಜಾರಿ, ಮಹೇಶ್ ನಾಯ್ಕ್, ವಾಸುದೇವ ಭಾಗವ, ಸುಬ್ರಾಯ ಸಾಲ್ವಂಕರ್ ಮೊದಲಾದವರು ಉಪಸ್ಥಿತರಿ ದ್ದರು. ಹಾಲು ಉತ್ಪಾದಕರ ಸಂಘದ ಕಾರ್ಯನಿರ್ವಹಣಾಧಿಕಾರಿ ರಜನೀಶ್ ನಾಯಕ್ ಸ್ವಾಗತಿಸಿದರು.