ಉ.ಕಾ.ಸುಬ್ಬರಾಯ ಆಚಾರ್ಯ ಸ್ಮಾರಕ ದತ್ತಿ ಉಪನ್ಯಾಸ
Update: 2018-08-05 19:47 IST
ಉಡುಪಿ, ಆ.5: ಮೈಸೂರು ವಿವಿವಿಯ ವಿದ್ಯಾರ್ಥಿ ಕ್ಷೇಮಪಾಲ, ರಾಷ್ಟ್ರೀಯ ಯೋಜನೆಗಳ ನಿರ್ದೇಶಕರಾಗಿದ್ದ ದಿ.ಉ.ಕಾ.ಸುಬ್ಬರಾಯ ಆಚಾರ್ಯರ ಸಂಸ್ಮರಣೆ ಪ್ರಯುಕ್ತ ಉಡುಪಿಯ ಆರ್.ವಿ.ಎಸ್. ಸಂಘದ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮವು ಇತ್ತೀಚೆಗೆ ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ವಾಸುದೇವ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಹುಬ್ಬಳ್ಳಿ ವಿಶ್ವಮಯಿ ಸಾಹಿತ್ಯ ಪ್ರಚಾರ ಸಮಿತಿಯ ಪ್ರಧಾನ ಸಂಪಾದಕ ಇಂ.ಐ.ಭೀಮ ಸೇನಾ ಬಡಿ ಗೇರ ದತ್ತಿ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಯಾಗಿ ಜಗದೀಶ ಆಚಾರ್ಯ ಮಾತನಾಡಿದರು. ಬಿ.ಎ. ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ ಆಚಾರ್ಯ ಸ್ವಾಗತಿಸಿದರು. ಜಯಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಅಲೆವೂರು ನಾಗರಾಜ ಆಚಾರ್ಯ ವಂದಿಸಿದರು.