ಈ ರಾಜ್ಯದಲ್ಲಿ ಈಗ ಗೋರಕ್ಷಕರಿಗೆ ಐಡಿ ಕಾರ್ಡ್!

Update: 2018-08-05 15:25 GMT

ಡೆಹ್ರಾಡೂನ್,ಆ.5: ಉತ್ತರಾಖಂಡವು ಶೀಘ್ರವೇ ಗೋರಕ್ಷಕರಿಗೆ ಗುರುತು ಚೀಟಿಗಳನ್ನು ನೀಡುವ ಮೊದಲ ರಾಜ್ಯವಾಗಲಿದೆ ಮತ್ತು ಅವರನ್ನು ಇನ್ನು ಮಂದೆ ಗೋ ಸಂರಕ್ಷಕರೆಂದು ಕರೆಯಲಾಗುವುದು ಎಂದು ರಾಜ್ಯ ಗೋ ಸೇವಾ ಆಯೋಗದ ಅಧ್ಯಕ್ಷ ಎನ್.ಎಸ್.ರಾವತ್ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಾಮಾಣಿಕ ಗೋರಕ್ಷಕರನ್ನು ಗೋರಕ್ಷಣೆಯ ಹೆಸರಿನಲ್ಲಿ ಹಿಂಸೆಗಿಳಿಯುವ ಗೂಂಡಾಗಳಿಂದ ಪ್ರತ್ಯೇಕವಾಗಿ ಗುರುತಿಸಲು ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದರು.

 ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ವ್ಯಕ್ತಪಡಿಸಿದ್ದ ಭಾವನೆಗೆ ಅನುಗುಣವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಗೋರಕ್ಷಣೆಯ ಹೆಸರಿನಲ್ಲಿ ಕೆಲವರು ಹಿಂಸಾಚಾರದಲ್ಲಿ ತೊಡಗುತ್ತಿದ್ದಾರೆ ಎಂದು ಅವರು ಹೇಳಿದ್ದರು ಎಂದು ತಿಳಿಸಿದ ರಾವತ್,ರಾಜ್ಯದ 13 ಜಿಲ್ಲೆಗಳ ಪೈಕಿ ಆರರಲ್ಲಿ ನಿಜವಾದ ಗೋರಕ್ಷಕರನ್ನು ಗುರುತಿಸಲಾಗಿದೆ. ಅವರಿಗೆ ಗುರುತು ಚೀಟಿಗಳನ್ನು ನೀಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News