×
Ad

ಶಾಂತಿಯುತ ಬಂಟ್ವಾಳ, ಮಾದರಿ ಗ್ರಾಮ ನಿರ್ಮಾಣವೇ ನನ್ನ ಗುರಿ: ಶಾಸಕ ರಾಜೇಶ್ ನಾಯ್ಕ್

Update: 2018-08-06 19:16 IST

ಬಂಟ್ವಾಳ, ಜು. 6: ಶಾಂತಿಯುತ ಬಂಟ್ವಾಳ, ಉದ್ಯೋಗ ಸೃಷ್ಠಿ, ಮಾದರಿ ಗ್ರಾಮ ನಿರ್ಮಾಣವೇ ನನ್ನ ಗುರಿಯಾಗಿದ್ದು, ಜನರ ಎಲ್ಲಾ ರೀತಿಯ ಸಮಸ್ಯೆಗೆ ಸೂಕ್ತ ರೀತಿಯ ಸ್ಪಂದಿಸಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು  ಹೇಳಿದ್ದಾರೆ.

ಬಿಜೆಪಿ ಉಳಿ ಗ್ರಾಮ ಪಂಚಾಯತ್ ಸಮಿತಿ ಇದರ ಆಶ್ರಯದಲ್ಲಿ ರವಿವಾರ ಕಕ್ಯಪದವು ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ ಉಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಹಾಗೂ ಮತದಾರರ ಅಭಿನಂದನಾ ಸಭೆಯಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು.

ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಬಿಜೆಪಿ ಉಳಿ ಗ್ರಾಮ ಸಮಿತಿ ಅಧ್ಯಕ್ಷ ವಸಂತ ಸಾಲ್ಯಾನ್ ರಾಮನಗರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಗಬೆಟ್ಟು ಜಿಲ್ಲಾ ಪಂಚಾಯತ್ ಸದಸ್ಯ ಎಂ. ತುಂಗಪ್ಪ ಬಂಗೇರ, ಉಳಿ ಗ್ರಾಪಂ ಉಪಾಧ್ಯಕ್ಷ ಸುರೇಶ್ ಮೈರ, ಬಿಜೆಪಿ ಪ್ರಮುಖರಾದ ಚಿದಾನಂದ ರೈ ಕಕ್ಯಪದವು, ಶಶಿಕಾಂತ್ ಶೆಟ್ಟಿ ಆರುಮುಡಿ, ಸುದರ್ಶನ್ ಬಜ, ಚೇತನ್ ಊರ್ದೊಟ್ಟು, ರೇವತಿ ಮುದಲಾಡಿ, ಗುಲಾಬಿ ಮಾಡೋಡಿ, ರಾಜ್‍ಕುಮಾರ್ ಬಳ್ಳಿ, ಯಶವಂತ, ಯತೀಶ್, ರೋಹಿನಾಥ, ವಿಠಲ ಭಂಡಾರಿ ಪುಣ್ಕೆದಡಿ, ಜಯಶ್ರೀ ಸುರೇಂದ್ರ, ರವಿ ಶೆಟ್ಟಿ, ನಾರಾಯಣ ಪೂಜಾರಿ, ನಾರಾಯಣ ಗೌಡ, ಸನತ್, ಮಹಾಬಲ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News