ಸಂಘ ಪರಿವಾರದ ನಕಲಿ ಹಿಂದುತ್ವಕ್ಕೆ ಬಲಿಯಾಗಬೇಡಿ: ಸ್ವಾಮಿ ಅಗ್ನಿವೇಶ್
ತಿರುವನಂತಪುರ, ಆ. 6: ಸಂಘ ಪರಿವಾರ ಕೋಮು ದ್ವೇಷವನ್ನು ಹರಡುತ್ತಿದೆ ಎಂದು ಆರೋಪಿಸಿರುವ ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್, ಈ ಪಿಡುಗಿನ ವಿರುದ್ಧ ಸಂಘಟಿತರಾಗುವಂತೆ ಜನರಿಗೆ ಕರೆ ನೀಡಿದ್ದಾರೆ. ತಿರುವನಂತಪುರದಲ್ಲಿ ವಿಚಾರಣ ಸಂಕಿರಣವೊಂದರಲ್ಲಿ ಮಾತನಾಡಿದ ಅವರು, ಸಂಘ ಪರಿವಾರ ಪ್ರಚಾರ ಮಾಡುತ್ತಿರುವ ನಕಲಿ ಹಿಂದುತ್ವಕ್ಕೆ ಬಲಿಯಾಗಬಾರದು ಎಂದಿದ್ದಾರೆ. ಕೋಮು ಶಕ್ತಿಯನ್ನು ಸವಾಲಾಗಿ ಸ್ವೀಕರಿಸಲು ಇದು ಸರಿಯಾದ ಸಮಯ. ಇಂದು ನಾವೆಲ್ಲರೂ ಸಂಘಟಿತರಾಗಬೇಕು. ಪ್ರಜಾಪ್ರಭುತ್ವವನ್ನು ಉಳಿಸಲು ಕೋಮವಾದದ ವಿರುದ್ಧ ಹೋರಾಡಬೇಕು ಹಾಗೂ ಶ್ರೇಷ್ಠ ಹಿಂದೂ ನಾಗರಿಕತೆ ಉಳಿಸಬೇಕು ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಮೋದಿ ಅವರು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ್ನು ಹಿಡಿತದಲ್ಲಿ ಇರಿಸಿಕೊಂಡಿದ್ದಾರೆ. ಮೋದಿ ಎಲ್ಲ ರೀತಿಯಲ್ಲೂ ಸರ್ವಾಧಿಕಾರಿ ಹಿಟ್ಲರ್‌ನಂತೆ ವರ್ತಿಸುತ್ತಿದ್ದಾರೆ. ಹಿಟ್ಲರ್ ಕೂಡ ಪ್ರಜಾಪ್ರಭುತ್ವದ ಮೂಲಕವೇ ಅಧಿಕಾಕ್ಕೆ ಬಂದ ಎಂದರು.