×
Ad

ಕೇಮಾರು ಸ್ವಾಮೀಜಿಗೆ ನಿಂದನೆ: ಸೆನ್‌ಗೆ ದೂರು

Update: 2018-08-06 21:30 IST

ಉಡುಪಿ, ಆ.6: ಕೇಮಾರು ಶ್ರೀಈಶ ವಿಠಲದಾಸ ಸ್ವಾಮೀಜಿಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಹಾಗೂ ಬೆದರಿಕೆಯೊಡ್ಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾರ್ಕಳ ಕುರ್ಕಿಲ ಬೆಟ್ಟು ಬಾಳಿಕೆ ಪಡುಮನೆಯ ಆದರ್ಶ್ ಶೆಟ್ಟಿ ಎಂಬವರು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಗೆ ಸೋಮವಾರ ದೂರು ನೀಡಿದ್ದಾರೆ.

ಉಡುಪಿ ಶೀರೂರು ಸ್ವಾಮೀಜಿ ಮೃತರಾದ ಬಳಿಕ ಕೆಲ ಕಿಡಿಗೇಡಿಗಳು ಕೇಮಾರು ಸ್ವಾಮೀಜಿಯ ಹೆಸರು ಹಾಳು ಮಾಡಲು ಹಾಗೂ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ ಮಾಡುವ ಉದ್ದೇಶದಿಂದ ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ಅವರ ನಿಂದನಾತ್ಮಕ ಬರಹ, ಮಾನಹಾನಿ ಲೇಖನ ಬರೆದು ಪರೋಕ್ಷವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಲಾಗಿದೆ.

ಸ್ವಾಮೀಜಿಯನ್ನು ನಿಂದನೆ ಮಾಡಿರುವ ವಾಟ್ಸಾಪ್ ನಂಬರ್ ಸಹಿತ ಠಾಣೆಗೆ ದೂರು ನೀಡಿದ್ದು, ಕಿಡಿಗೇಡಿಗಳನ್ನು ವಿಚಾರಣೆಗೆ ಒಳಪಡಿಸಬೇಕು. ಮುಂದೆ ಈ ರೀತಿಯ ತೊಂದರೆ ಮರುಕಳಿಸದಂತೆ ನೋಡಿಕೊಳ್ಳಬೆೀಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News