×
Ad

ಉಳ್ಳಾಲ: ವಿದ್ಯುತ್ ಆಘಾತದಿಂದ ಯುವಕ ಮೃತ್ಯು

Update: 2018-08-06 22:13 IST

ಉಳ್ಳಾಲ,ಆ.6: ಉಳ್ಳಾಲ ದರ್ಗಾ ಕಾಲೇಜಿನ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ತಗಟು ಶೀಟು ತೆಗೆಯುತ್ತಿದ್ದಾಗ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಯುವಕನೊರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.

ಮೃತಪಟ್ಟ ಯುವಕನನ್ನು ಕೊಣಾಜೆ ಅಡ್ಕರೆಪಡ್ಪು ನಿವಾಸಿ ಬಶೀರ್ ಎಂಬವರ ಪುತ್ರ ಯೂಸುಫ್(25) ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳಿದ ಉಳ್ಳಾಲ ದರ್ಗಾ ಆವರಣದಲ್ಲಿರುವ ಖಾಝಿ ಭವನದ ಪಕ್ಕದ ಅರೆಬಿಕ್ ಕಾಲೇಜಿನ ಕಟ್ಟಡ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಇಲ್ಲಿ ಯೂಸುಫ್ ಅವರು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಸೋಮವಾರ ತಗಡು ಶೀಟು ತೆಗೆಯುವವರಿಗೆ ಸಹಾಯ ಮಾಡಲೆಂದು ಹೋಗಿದ್ದರು ಎನ್ನಲಾಗಿದೆ.

ಅಡಿಭಾಗದಲ್ಲಿ ಕಬ್ಬಿಣದ ರ್ಯಾಕ್‍ನಲ್ಲಿ ನಿಂತು ತಗಡನ್ನು ಎತ್ತುವ ಸಂದರ್ಭ ದರ್ಗಾ ಆವರಣದ ಹೊರಭಾಗದಲ್ಲಿದ್ದ ಟ್ರಾನ್ಸ್ ಫಾರ್ಮ್‍ರ್ ಕಂಬದ ಹೈಟೆನ್ಷನ್ ತಂತಿಗೆ ತಗಡು ತಾಗಿದ್ದು ಈ ಸಂದರ್ಭ ವಿದ್ಯುತ್ ಶಾಕ್‍ನಿಂದಾಗಿ ಯೂಸುಫ್ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಗೆ ದೂರು ನೀಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News