ಮೌಲಾನಾ ಬೇಗ್ ನದ್ವಿ ಆ.7ರಂದು ಉಡುಪಿಗೆ
Update: 2018-08-06 22:38 IST
ಉಡುಪಿ, ಆ.6: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಷ್ಟ್ರೀಯ ಅಧ್ಯಕ್ಷ ಹಝ್ರತ್ ಮೌಲಾನಾ ಮುಹಮ್ಮದ್ ಅಹ್ಮದ್ ಬೇಗ್ ನದ್ವೀ(ಉಸ್ತಾದುಲ್ ಹದೀಸ್ ನದ್ವತುಲ್ ಉಲೆಮಾ ಲಕ್ನೋ) ಆ.7ರಂದು ಉಡುಪಿಗೆ ಆಗಮಿಸಲಿದ್ದಾರೆ.
ಇವರು ಸಂಜೆ ಏಳು ಗಂಟೆಗೆ ಆದಿಉಡುಪಿ ಜುಮಾ ಮಸೀದಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ ಎಂದು ಉಡುಪಿ ಜಿಲ್ಲಾ ಇಮಾಮ್ಸ್ ಕೌನ್ಸಿಲ್ ಕಾರ್ಯದರ್ಶಿ ಹಾಫಿಝ್ ಅಬ್ದುಲ್ ಗಫೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.