×
Ad

ಪ್ರವಾಸೋದ್ಯವು: ಕೌಶಲ್ಯ ಅಭಿವೃದ್ಧಿ ಉಚಿತ ತರಬೇತಿ

Update: 2018-08-06 23:52 IST

ಉಡುಪಿ, ಆ.6: ಉಡುಪಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿವಿಧ ಹೋಂ ಸ್ಟೇ ಮಾಲೀಕರಿಗೆ/ಹೊಸದಾಗಿ ಹೋಂ ಸ್ಟೇ ನಡೆಸಲು ಇಚ್ಛೆ ಹೊಂದಿರುವವರಿಗೆ ಹಾಗೂ ಬೈಂದೂರು/ಕೊಲ್ಲೂರು/ಕುಂದಾಪುರ ವ್ಯಾಪ್ತಿಯ ಟೂರಿಸ್ಟ್ ಟ್ಯಾಕ್ಸಿ ಮಾಲೀಕರು/ಚಾಲಕರಿಗೆ ಉಚಿತ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ತರಬೇತಿಯು ಆ.8ರಂದು ಬೆಳಗ್ಗೆ 10.30ಕ್ಕೆ ಹೋಂ ಸ್ಟೇ ಮಾಲೀಕರಿಗೆ ಹಾಗೂ ಹೊಸದಾಗಿ ಹೋಂಸ್ಟೇ ನಡೆಸಲು ಇಚ್ಛಿಸುವವರಿಗೆ ಅಂಬಲಪಾಡಿ ಸಮೀಪದ ಕಡೆಕಾರ್ ಗ್ರಾಮದ ಸೀ ವೀವ್ ಹೋಂ ಸ್ಟೇಯಲ್ಲಿ ನಡೆಯಲಿದೆ. ಆ.9ರಂದು ಮಧ್ಯಾಹ್ನ 1.30ಕ್ಕೆ ಬೈಂದೂರು/ ಕೊಲ್ಲೂರು/ ಕುಂದಾಪುರ ವ್ಯಾಪ್ತಿಯ ಟೂರಿಸ್ಟ್ ಟ್ಯಾಕ್ಸಿ ಮಾಲೀಕರು/ ಚಾಲಕರಿಗೆ ತರಬೇತಿಯು ಬೈಂದೂರು ರೈಲ್ವೆ ನಿಲ್ದಾಣದ ಬಳಿಯ ಹೋಟೆಲ್ ಅಂಬಿಕಾ ಇಂಟರ್ ನ್ಯಾಷನಲ್‌ನಲ್ಲಿ ನಡೆಯಲಿದೆ ಎಂದು ಉಡುಪಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News