×
Ad

ಅಮೆರಿಕ ಸೆನೆಟ್ ಅಧಿಕಾರಿ ಕೆಎಸ್‌ರಿಲೀಫ್‌ಗೆ ಭೇಟಿ

Update: 2018-08-07 20:11 IST

ಜಿದ್ದಾ, ಆ. 7: ಅಮೆರಿಕ ಸೆನೆಟ್‌ನ ವಿದೇಶ ಸಂಬಂಧಗಳ ಸಮಿತಿಯ ಮಧ್ಯಪ್ರಾಚ್ಯ ವ್ಯವಹಾರಗಳ ಸೀನಿಯರ್ ಸ್ಟಾಫ್ ರಿಪಬ್ಲಿಕನ್ ಉಸ್ತುವಾರಿ ಅಧಿಕಾರಿ ಆರ್ಕ್ ಟ್ರಿಗರ್ ಸೋಮವಾರ ಸೌದಿ ಅರೇಬಿಯ ರಾಜಧಾನಿ ರಿಯಾದ್‌ನಲ್ಲಿ ಕಿಂಗ್ ಸಲ್ಮಾನ್ ಮಾನವೀಯ ನೆರವು ಮತ್ತು ಪರಿಹಾರ ಕೇಂದ್ರ (ಕೆಎಸ್‌ರಿಲೀಫ್)ಕ್ಕೆ ಭೇಟಿ ನೀಡಿದರು.

ಅವರು ಕೆಎಸ್‌ರಿಲೀಫ್‌ನ ಸಹಾಯಕ ಮಹಾ ಉಸ್ತುವಾರಿ ಅಹ್ಮದ್ ಬಿನ್ ಅಲಿ ಅಲ್-ಬೈಝ್‌ರನ್ನು ಭೇಟಿಯಾದರು.

ಕೆಎಸ್‌ರಿಲೀಫ್‌ನ ಚಟುವಟಿಕೆಗಳು ಮತ್ತು ಸಾಧನೆಗಳ ಕುರಿತ ವಿವರಗಳನ್ನು ಟ್ರಿಗರ್‌ಗೆ ನೀಡಲಾಯಿತು.

ಕೆಎಸ್‌ರಿಲೀಫ್ ಜಗತ್ತಿನಾದ್ಯಂತ ಯಾವುದೇ ತಾರತಮ್ಯವಿಲ್ಲದೆ 42 ದೇಶಗಳಲ್ಲಿ ಪರಿಹಾರ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಕೆಎಸ್‌ರಿಲೀಫ್ 450 ವಿವಿಧ ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಹಾಗೂ ಈ ಪೈಕಿ 274 ಯೋಜನೆಗಳು ಯಮನ್‌ನಲ್ಲಿ ಜಾರಿಯಲ್ಲಿವೆ ಎಂದು ಸೌದಿ ಅಧಿಕಾರಿಗಳು ಅಮೆರಿಕನ್ ಪ್ರತಿನಿಧಿಗೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News