ನನ್ನ ಕಣ್ಣಿಗೆ ಮಣ್ಣೆರಚಿ ಅವರು ಥಳಿಸಿದರು: ಅಮೆರಿಕದಲ್ಲಿ ಹಲ್ಲೆಗೊಳಗಾದ ಸಿಖ್

Update: 2018-08-07 15:45 GMT

ನ್ಯೂಯಾರ್ಕ್, ಆ. 7: ‘‘ನನ್ನ ಪೇಟ ನನ್ನನ್ನು ರಕ್ಷಿಸಿತು’’ ಎಂಬುದಾಗಿ ಇಬ್ಬರು ಬಿಳಿಯ ವ್ಯಕ್ತಿಗಳಿಂದ ಹಲ್ಲೆ ಹಾಗೂ ಜನಾಂಗೀಯ ನಿಂದನೆಗೊಳಗಾಗಿರುವ 50 ವರ್ಷದ ಸಿಖ್ ವ್ಯಕ್ತಿಯೊಬ್ಬರು ಹೇಳಿದ್ದಾರೆ.

‘‘ನಾನು ಕ್ಯಾಲಿಫೋರ್ನಿಯದಲ್ಲಿರುವ ನನ್ನ ಮನೆಯ ಸಮೀಪ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಜೆಫ್ ಡೆನ್ಹಮ್‌ರ ಚುನಾವಣಾ ಪ್ರಚಾರದ ಬ್ಯಾನರ್‌ಗಳನ್ನು ಹಾಕುತ್ತಿದ್ದೆ. ಆಗ ಇಬ್ಬರು ಬಿಳಿಯ ವ್ಯಕ್ತಿಗಳು ನನ್ನ ಮೇಲೆ ದಾಳಿ ನಡೆಸಿದರು ಹಾಗೂ ನನ್ನ ವಿರುದ್ಧ ಜನಾಂಗೀಯ ನಿಂದನೆಯ ಘೋಷಣೆಗಳನ್ನು ಕೂಗಿದರು’’ ಎಂದು ಸುರ್ಜಿತ್ ಸಿಂಗ್ ಮಾಲ್ಹಿ ತಿಳಿಸಿದರು.

‘‘ನೀನಿಲ್ಲಿ ಬರಬಾರದು! ನಿನ್ನ ದೇಶಕ್ಕೆ ಹೊರಟು ಹೋಗು!’’ ಎಂದು ಅವರು ಕಿರುಚಿದರು.

‘‘ಅವರ ದಾಳಿಯಿಂದ ನನ್ನ ಪೇಟ ನಿಜವಾಗಿಯೂ ನನ್ನನ್ನು ರಕ್ಷಿಸಿತು’’ ಎಂದು ಅವರು ‘ನ್ಯೂಯಾರ್ಕ್ ಟೈಮ್ಸ್’ಗೆ ಹೇಳಿದರು.

‘‘ಅವರು ಹಿಂದಿನಿಂದ ಬಂದು ನನ್ನ ಮೇಲೆ ಆಕ್ರಮಣ ಮಾಡಿದರು. ನನ್ನ ಕಣ್ಣಿಗೆ ಮರಳು ಎರಚಿದರು. ಕೋಲು ಮತ್ತು ಬೆಲ್ಟ್‌ನಿಂದ ಅವರ ನನ್ನ ತಲೆಗೆ ಹೊಡೆದರು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News