×
Ad

ಮಂಗಳೂರು: ಲಾಡ್ಜ್‌ನಲ್ಲಿಯುವಕ ಆತ್ಮಹತ್ಯೆ

Update: 2018-08-07 22:07 IST

ಮಂಗಳೂರು, ಆ.7: ನಗರದ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸಾಯಿ ಲಾಡ್ಜ್‌ನಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವುದು ಮಂಗಳವಾರ ಪತ್ತೆಯಾಗಿದೆ.

ಬಜಾಲ್ ನಿವಾಸಿ ಪ್ರಶಾಂತ್ (28) ಆತ್ಮಹತ್ಯೆಗೆ ಶರಣಾದ ಯುವಕ.

ಆ. 5ರಂದು ಲಾಡ್ಜ್‌ಗೆ ಆಗಮಿಸಿ ರೂಮ್ ಪಡೆದಿದ್ದ ಪ್ರಶಾಂತ್ ಸೋಮವಾರವಿಡೀ ಬಾಗಿಲು ತೆರೆದಿರಲಿಲ್ಲ. ಮಂಗಳವಾರ ವಾಸನೆ ಬಂದಿದ್ದು, ಕಿಟಕಿ ಮೂಲಕ ನೋಡಿದಾಗ ರೂಮ್ ಒಳಗಡೆ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಬಳಿಕ ಪೊಲೀಸರು ತೆರಳಿ, ಬಾಗಿಲು ತೆರೆದು ಶವವನ್ನು ಶವಾಗಾರಕ್ಕೆ ಸಾಗಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಬಂದರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News