ಆ.11, 12ರಂದು ಸೌಹಾರ್ದಕ್ಕಾಗಿ ಸಹಪಯಣ ಕಾರ್ಯಕ್ರಮ
ಮಂಗಳೂರು, ಆ.7: ‘ಟ್ರೈನ್ ಟು ಪಾಕಿಸ್ತಾನ್’ನಿಂದ ಆರಂಭವಾದ ದೇಶವಿಭಜನೆಯ ಕತೆಗಳ ಓದು ತಮಸ್, ಮಾಂಟೋ ಕತೆಗಳು, ಬರ್ಕ್ ವೈಟ್ ಕಂಡ ಭಾರತ ಮುಂತಾದ ಮತೀಯವಾದದ ಪೊಳ್ಳುತನ ವಿರುದ್ಧದ ಸಶಕ್ತ ಕತೆಗಳ ಓದಿನ ಮೂಲಕ ಸೌಹಾರ್ದಕ್ಕಾಗಿ ಸಹಪಯಣವು ಆ.11, 12ರಂದು ಮಂಗಳೂರಿನ ಶಕ್ತಿನಗರದಲ್ಲಿರುವ ಕಲಾಂಗಣ್‌ನಲ್ಲಿ ಸಮಾರೋಪಗೊಳ್ಳಲಿದೆ.
ಎರಡು ದಿನದ ಶಿಬಿರದಲ್ಲಿ ಉಪನ್ಯಾಸ, ಸಂವಾದ, ಗುಂಪುಚರ್ಚೆ, ನಾಟಕ, ಕವಿಗೋಷ್ಟಿ, ಹಾಡುಗಳು ಇರಲಿವೆ. ನಾಡಿನ ಸಾಕ್ಷಿಪ್ರಜ್ಞೆಗಳಾದ ಪ್ರೊ.ರಹಮತ್ ತರೀಕೆರೆ, ದಿನೇಶ್ ಅಮೀನ್ ಮಟ್ಟು ಎರಡು ದಿನದ ಶಿಬಿರವನ್ನು ನಡೆಸಿಕೊಡಲಿದ್ದಾರೆ.
ಡಾ.ಹಸೀನಾ ಖಾದ್ರಿ, ಶ್ರೀಪಾದ ಭಟ್, ಡಾ.ರಾಮಮೂರ್ತಿ, ಡಾ.ಕಿರಣ್ ಗಾಜನೂರು ಮತ್ತಿತರರು ಎರಡು ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಆ.11ರ ಬೆಳಗ್ಗೆ 10:15ಕ್ಕೆ ರಹಮತ್ ತರೀಕೆರೆ, ದಿನೇಶ್ ಅಮೀನ್ ಮಟ್ಟು ಮಾತುಗಳ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು, ಉದ್ಘಾಟನಾ ಕಾರ್ಯಕ್ರಮಕ್ಕೆ ಆಸಕ್ತರಿಗೆ ಮುಕ್ತ ಪ್ರವೇಶವಿದೆ. ಸಂಜೆ 6ರಿಂದ ಕವಿಗೋಷ್ಟಿ, ಮಾಂಟೊ ಕತೆಗಳ ನಾಟಕ ಪ್ರದರ್ಶನವಿದೆ ಎಂದು ಪ್ರಕಟನೆ ತಿಳಿಸಿದೆ.