ಬಸ್ರೂರು: ದನ ಕಳವಿಗೆ ಯತ್ನ
Update: 2018-08-07 23:04 IST
ಕುಂದಾಪುರ, ಆ.7: ಬಸ್ರೂರಿನಲ್ಲಿರುವ ಪೆಟ್ರೋಲ್ ಬಂಕ್ ಬಳಿ ರಸ್ತೆಯಲ್ಲಿ ಕಾರಿನಲ್ಲಿ ಬಂದು ದನ ಕಳವಿಗೆ ಯತ್ನಿಸಿರುವ ಘಟನೆ ಆ.6ರಂದು ನಸುಕಿನ ವೇಳೆ ನಡೆದಿದೆ.
ಬಿಳಿ ಮಾರುತಿ ಸುಝುಕಿ ರಿಡ್ಜಾ ಕಾರಿನಲ್ಲಿ ಬಂದ ನಾಲ್ಕು ಮಂದಿ ಪೆಟ್ರೋಲ್ ಬಂಕ್ ಬಳಿ ದನವನ್ನು ಹಿಡಿಯಲು ಪ್ರಯತ್ನಿಸುತ್ತಿದ್ದು, ಸ್ಥಳೀಯ ನಿವಾಸಿ ಶ್ರೀಕಾಂತ್ ಎಂಬವರನ್ನು ನೋಡಿದ ಕಳ್ಳರು ಕಾರಿನಲ್ಲಿ ಪರಾರಿಯಾಗಿ ದ್ದಾರೆ. ಈ ಘಟನೆ ಪೆಟ್ರೋಲ್ ಬಂಕ್‌ನ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.