ಗಾಂಜಾ ಸೇವನೆ: ಮೂವರು ವಶಕ್ಕೆ
Update: 2018-08-07 23:05 IST
ಉಡುಪಿ, ಆ.7: ಗಾಂಜಾ ಸೇವನೆ ಮಾಡಿದ್ದ ಮೂವರನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಆ.6ರಂದು ವಶಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಣಿಪಾಲ ಶಿಂಬ್ರಾ ಗಣಪತಿ ದೇವಸ್ಥಾನದ ಬಳಿ ಪರ್ಕಳ ಶೆಟ್ಟಿಬೆಟ್ಟುವಿನ ಅಕ್ಷಯ್(21), ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ಟ್ರೈನಿಂಗ್ ಸೆಂಟರ್ ಬಳಿ ಪರ್ಕಳದ ಧನಂಜಯ್(21) ಹಾಗೂ ಮಣಿಪಾಲ ರಾಜೀವನಗರ ಬಸ್ ನಿಲ್ದಾಣದ ಬಳಿ ಪರ್ಕಳ ನೇತಾಜಿನಗರದ ಇರ್ಷಾದ್(28) ಎಂಬವರನ್ನು ಸೆನ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.