ಸಿರಿಯ ಪ್ರಜೆಗಳ ವಾಪಸಾತಿಗೆ ಸಮನ್ವಯ ಸಮಿತಿ: ಸರಕಾರ

Update: 2018-08-07 17:40 GMT

ಡಮಾಸ್ಕಸ್, ಆ. 7: ಏಳು ವರ್ಷಗಳ ಆಂತರಿಕ ಸಂಘರ್ಷದ ಅವಧಿಯಲ್ಲಿ ದೇಶ ತೊರೆದಿರುವ ಲಕ್ಷಾಂತರ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳುವ ನಿಟ್ಟಿನಲ್ಲಿ ಸಮನ್ವಯ ಸಾಧಿಸಲು ಸಮಿತಿಯೊಂದನ್ನು ಸ್ಥಾಪಿಸುವುದಾಗಿ ಸಿರಿಯ ಸರಕಾರ ಹೇಳಿದೆ.

‘‘ವಿದೇಶಗಳಿಗೆ ಪಲಾಯನಗೈದಿರುವ ಜನರನ್ನು ಅವರ ನಗರಗಳು ಮತ್ತು ಗ್ರಾಮಗಳಿಗೆ ವಾಪಸ್ ಕರೆಸಿಕೊಳ್ಳುವ ನಿಟ್ಟಿನಲ್ಲಿ ಸಮನ್ವಯ ಸಮಿತಿಯೊಂದನ್ನು ಸ್ಥಾಪಿಸಲು ಸಚಿವ ಸಂಪುಟ ರವಿವಾರ ಒಪ್ಪಿಗೆ ನೀಡಿದೆ’’ ಎಂದು ಸರಕಾರಿ ಸುದ್ದಿ ಸಂಸ್ಥೆ ‘ಸನ’ ವರದಿ ಮಾಡಿದೆ.

ಇರಾನ್ ವಿರುದ್ಧದ ಆರ್ಥಿಕ ದಿಗ್ಬಂಧನಗಳನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ. ಇದು ಈವರೆಗಿನ ದಿಗ್ಬಂಧನಗಳಲ್ಲೇ ಅತ್ಯಂತ ಕಠಿಣವಾಗಿದೆ. ಇರಾನ್ ಜೊತೆಗೆ ವ್ಯಾಪಾರ ಮಾಡುವವರು ಅಮೆರಿಕ ಜೊತೆಗೆ ವ್ಯಾಪಾರ ಮಾಡಲು ಸಾಧ್ಯವಿಲ್ಲ. ನಾನು ಜಾಗತಿಕ ಶಾಂತಿಗಾಗಿ ಪ್ರಯತ್ನಿಸುತ್ತಿದ್ದೇನೆಯೇ ವಿನಃ ಬೇರೇನೂ ಅಲ್ಲ.

ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News