ಇನೋಳಿ: ಮೀನು ಹಿಡಿಯಲು ಹೋದ ಯುವಕ ನೀರುಪಾಲು
Update: 2018-08-09 18:35 IST
ಕೊಣಾಜೆ, ಆ. 9: ಇನೋಳಿ ಸಮೀಪದ ಗುಂಡ್ಯದ ನೇತ್ರಾವತಿ ನದಿಯ ಬಳಿ ಮೀನು ಹಿಡಿಯಲು ತೆರಳಿದ್ದ ಯುವಕನೊರ್ವ ನೀರುಪಾಲಾದ ಘಟನೆ ಗುರುವಾರ ಸಂಜೆ ಸಂಭವಿಸಿದೆ.
ನೀರುಪಾಲದ ಯುವಕನನ್ನು ಪಜೀರು ಗ್ರಾಮದ ಹರೀಶ್ ನಾಯ್ಕ (30) ಎಂದು ಗುರುತಿಸಲಾಗಿದೆ.
ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಅಪಾಯಮಟ್ಟದಲ್ಲಿ ಹರಿಯುತ್ತಿದೆ. ಇದರಿಂದಾಗಿ ನದಿಯ ನೀರು ಸಮೀಪದ ಗದ್ದೆಗಳಲ್ಲೂ ತುಂಬಿ ಹರಿಯುತ್ತಿದೆ. ಗುರುವಾರ ಹರೀಶ್ ಇದೇ ಪ್ರದೇಶದಲ್ಲಿ ಮೀನು ಹಿಡಿಯಲು ಪ್ರಯತ್ನಿಸಿದಾಗ ನೀರು ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ಹಾಗೂ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ.