ಮಂಗಳೂರಿನ ಕೆ.ಎಲ್.ರಾಹುಲ್ ಪೂಮಾ ರಾಯಭಾರಿ
Update: 2018-08-09 18:46 IST
ಮಂಗಳೂರು, ಆ. 9: ಭಾರತ ಕ್ರಿಕೆಟ್ ತಂಡದ ಹೊಸ ಸೆನ್ಸೇಷನ್ ಮಂಗಳೂರು ಮೂಲದ ಕೆ.ಎಲ್.ರಾಹುಲ್ ಅವರನ್ನು ಜಾಗತಿಕ ಕ್ರೀಡಾ ಪರಿಕರಗಳ ಬ್ರಾಂಡ್ ಪೂಮಾ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಿಕೊಂಡಿದೆ.
ಬ್ರಾಂಡ್‌ನ ಹೊಸ ಉತ್ಪನ್ನಗಳ ರಾಯಭಾರಿಯಾಗಿ ವಿರಾಟ್ ಕೊಹ್ಲಿ ಹಾಗೂ ಇತರ ಕ್ರೀಡಾ ದಿಗ್ಗಜರ ಜತೆ ಮೂರು ವರ್ಷಗಳ ವರೆಗೆ ರಾಹುಲ್ ಕಾರ್ಯನಿರ್ವಹಿಸುವರು.
26 ವರ್ಷದ ರಾಹುಲ್ ಕ್ರಿಕೆಟ್‌ನ ಎಲ್ಲ ಮೂರೂ ಪ್ರಕಾರಗಳಲ್ಲಿ ಅತ್ಯಂತ ಕ್ಷಿಪ್ರವಾಗಿ ಶತಕ ಬಾರಿಸಿದ ದಾಖಲೆ ಹೊಂದಿದ್ದು, ಅವರ ಬದ್ಧತೆ, ವಿಶ್ವಾಸ, ಶಕ್ತಿ, ಉತ್ಕೃಷ್ಟತೆ ಮತ್ತು ವೈವಿಧ್ಯತೆಯ ಕಾರಣಗಳಿಂದ ಅವರು ಬ್ರಾಂಡ್‌ಗೆ ಅತ್ಯಂತ ಸೂಕ್ತ ವ್ಯಕ್ತಿಯಾಗಿ ಪರಿಗಣಿಸಲಾಗಿದೆ ಎಂದು ಪೂಮಾ ಇಂಡಿಯಾ ಆಡಳಿತ ನಿರ್ದೇಶಕ ಅಭಿಷೇಕ್ ಗಂಗೂಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.