×
Ad

ಆ. 16: ಪುನೀತ್ ಶೆಟ್ಟಿ ಹಲ್ಲೆ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಧರಣಿ

Update: 2018-08-09 20:10 IST
ಪುನೀತ್ ಶೆಟ್ಟಿ

ಮಂಗಳೂರು, ಆ. 9: ಯುವ ಇಂಟಕ್ ದಕ್ಷಿಣ ವಿಧಾನಸಭಾ ಅಧ್ಯಕ್ಷ ಪುನೀತ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಲು ಒತ್ತಾಯಿಸಿ ಆ. 16ರಂದು ಬೆಳಗ್ಗೆ 11 ಗಂಟೆಗೆ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ದ.ಕ. ಜಿಲ್ಲಾ ಇಂಟಕ್ ನಾಯಕ ದೀಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.

ಪಕ್ಷದ ಕಾರ್ಯಕ್ರಮದಲ್ಲಿ ಹಿರಿಯ ನಾಯಕರ ಎದುರು ಹಲ್ಲೆ ನಡೆಸಿರುವುದು ಖಂಡನೀಯ. ಇದು ಪಕ್ಷದ ವರ್ಚಸ್ಸಿಗೆ ಹಾನಿಯಾಗಿರುತ್ತದೆ. ಯುವ ಇಂಟಕ್ ಮೂಲಕ ಜಿಲ್ಲೆಯಲ್ಲಿ ಯುವಕರು ಬೆಳೆಯುತ್ತಿರುವುದನ್ನು ಸಹಿಸದ, ಪಕ್ಷದಲ್ಲಿ ವೇದಿಕೆಗೆ ಸೀಮಿತವಾಗಿರುವ ಯುವ ಕಾಂಗ್ರೆಸ್ ನ ಕೆಲವು ಗೂಂಡಾಗಳು ಹಲ್ಲೆ ನಡೆಸಿರುವುದರಿಂದ ಅವರನ್ನು ಕೂಡಲೇ ದಸ್ತಗಿರಿ ಮಾಡಬೇಕು. ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರು ಒಗ್ಗಟ್ಟಾಗಿ ಇಂತಹ ಗೂಂಡಾಗಳಿಗೆ ತಕ್ಕ ಪಾಠಗಳಿಸಬೇಕು. ಕಾರ್ಮಿಕ ನಾಯಕನ ಮೇಲೆ ಹಲ್ಲೆ ವಿಷಾದನೀಯ. ಪಕ್ಷದ ವರಿಷ್ಠರು ಕೂಡಲೇ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳಬೇಕು. ಆರೋಪಿಗಳನ್ನು ಬಂಧಿಸದಿದ್ದರೆ ಗುರುವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಇಂಟಕ್ ನಾಯಕ ದೀಕ್ಷಿತ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News