ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Update: 2018-08-09 15:39 GMT

ಬ್ರಹ್ಮಾವರ, ಆ.9: ಜಮೀಯ್ಯತುಲ್ ಫಲಾಹ್ ಬ್ರಹ್ಮಾವರ ಘಟಕದ ವತಿ ಯಿಂದ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಬಡ ಕುಟುಂಬದ ವಿದ್ಯಾರ್ಥಿ ಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಝಕಾತ್ ಪಡೆಯಲು ಅರ್ಹರಾಗಿರುವ ಪ್ರಥಮ ಪಿಯುಸಿ ಮತ್ತು ಪ್ರಥಮ ಪದವಿ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಹಾಗೂ ಐಟಿಐ, ಡಿಪ್ಲೊಮಾ ಕಲಿಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಲಿಖಿತ ಅರ್ಜಿಯನ್ನು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಆ.16ರೊಳಗೆ ಜಿಮೀಯ್ಯತುಲ್ ಫಲಾಹ್, ಬ್ರಹ್ಮಾವರ ಘಟಕ, ನೆಲ ಮಹಡಿ, ಬಾರ್ನೆಸ್ ಕಾಂಪ್ಲೆಕ್ಸ್, ಮಾರ್ಕೆಟ್ ರಸ್ತೆ, ಬ್ರಹ್ಮಾವರ ಈ ವಿಳಾಸಕ್ಕೆ ಅಂಚೆ ಮೂಲಕ ಕಳು ಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್- 9448216862ನ್ನು ಸಂಪರ್ಕಿಸ ಬಹುದು ಎಂದು ಘಟಕದ ಅಧ್ಯಕ್ಷ ಕೆ.ಇಬ್ರಾಹಿಂ ಸಾಹೇಬ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News