ಉಡುಪಿ: ವಾಹನ ನಿಲುಗಡೆಗೆ ನಿಷೇಧ
ಉಡುಪಿ, ಆ.9: ಕಾರ್ಕಳ ತಾಲೂಕು ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಕೌಡೂರು ಗ್ರಾಮದ ರಂಗನಪಲ್ಕೆಯಲ್ಲಿರುವ ಮಿರಾಂಡ ಗ್ರೀನ್‌ವ್ಯೆ ಕಟ್ಟಡದ ಎದುರಿನ ಪ್ರದೇಶದಲ್ಲಿ ರಿಕ್ಷಾ ಸೇರಿದಂತೆ ವಾಹನಗಳ ನಿಲುಗಡೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೆೀರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.
ಈ ಪ್ರದೇಶದಲ್ಲಿ ಅಟೋರಿಕ್ಷಾ ಚಾಲಕರು, ಮಿರಾಂಡ ಗ್ರೀನ್ ವ್ಯೆ ಕಟ್ಟಡದ ಮಾಲಕ ಐವಾನ್ ಮಿರಾಂಡ, ಕಟ್ಟಡದಲ್ಲಿರುವ ನಿವಾಸಿಗಳು ಹಾಗೂ ಅಂಗಡಿ ಮಾಲಕರಿಗೆ ಆಟೋನಿಲ್ದಾಣದ ವಿಚಾರದಲ್ಲಿ ಆಗಾಗ ತಕರಾರುಗಳು ಉಂಟಾಗುತಿದ್ದು, ಇದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ತೊಂದರೆಯಾಗುತ್ತಿರುವುದರಿಂದ ಕೌಡೂರು ಗ್ರಾಮದ ರಂಗನಪಲ್ಕೆಯ ಮಿರಾಂಡ ಗ್ರೀನ್ ವ್ಯೆ ಕಟ್ಟಡದ ಎದುರುಗಡೆ ಪ್ರದೇಶವನ್ನು ನೋ ಪಾರ್ಕಿಂಗ್ ವಲಯ ಎಂದು ಘೋಷಿಸಿ ಅಧಿಸೂಚನೆ ಹೊರಡಿಸುವಂತೆ ಉಡುಪಿ ಪೊಲೀಸ್ ಅಧೀಕ್ಷಕರು ಕೋರಿದ್ದರು.
ಈ ಬಗ್ಗೆ ಬೈಲೂರು ಗ್ರಾಪಂನಿಂದ ವರದಿ ಪಡೆಯಲಾಗಿದ್ದು, ವರದಿಯ ಆಧಾರದಲ್ಲಿ ರಂಗನಪಲ್ಕೆ ಪರಿಸರದ ಸಾರ್ವಜನಿಕರ ಶಾಂತಿ/ ನೆಮ್ಮದಿ ಕಾಪಾಡುವ ದೃಷ್ಟಿಯಿಂದ ಈ ಪ್ರದೇಶವನ್ನು ವಾಹನ ನಿಲುಗಡೆ ನಿಷೇಧಿತ ಪ್ರದೇಶ ಎಂದು ಘೋಷಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೆೀರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.