ಫೆಲೆಸ್ತೀನ್ ರಾಷ್ಟ್ರಕ್ಕೆ ಕೊಲಂಬಿಯ ಮಾನ್ಯತೆ

Update: 2018-08-09 15:53 GMT

ಬೊಗೊಟ (ಕೊಲಂಬಿಯ), ಆ. 9: ಕೊಲಂಬಿಯ ದೇಶವು ಫೆಲೆಸ್ತೀನನ್ನು ಸಾರ್ವಭೌಮ ರಾಷ್ಟ್ರವಾಗಿ ಅಂಗೀಕರಿಸಿದೆ.

ಗುರುವಾರ ಬಹಿರಂಗಪಡಿಸಲಾದ ವಿದೇಶ ಸಚಿವಾಲಯದ ಪತ್ರವೊಂದು ಈ ವಿಷಯವನ್ನು ತಿಳಿಸಿದೆ.

ಆದಾಗ್ಯೂ, ನೂತನ ಅಧ್ಯಕ್ಷ ಇವಾನ್ ಡಕ್ ಅಧಿಕಾರ ಸ್ವೀಕರಿಸುವ ದಿನಗಳ ಮುನ್ನ ಹಳೆ ಸರಕಾರವು ಈ ಮಾನ್ಯತೆ ನೀಡಿದೆ.

‘‘ಕೊಲಂಬಿಯ ಸರಕಾರದ ಪರವಾಗಿ ಅಧ್ಯಕ್ಷ ಜುವಾನ್ ಮ್ಯಾನುಯಲ್ ಸಂಟೋಸ್ ಅವರು ಫೆಲೆಸ್ತೀನನ್ನು ಸ್ವತಂತ್ರ ಹಾಗು ಸಾರ್ವಭೌಮ ರಾಷ್ಟ್ರವನ್ನಾಗಿ ಮಾನ್ಯ ಮಾಡಲು ನಿರ್ಧರಿಸಿದ್ದಾರೆ’’ ಎಂಬುದಾಗಿ ಆಗಸ್ಟ್ 3ರ ದಿನಾಂಕದ ಪತ್ರ ಹೇಳುತ್ತದೆ.

ಪತ್ರಕ್ಕೆ ಸಂಟೋಸ್‌ರ ವಿದೇಶ ಸಚಿವೆ ಮರಿಯಾ ಆ್ಯಂಜೆಲಾ ಹಾಲ್‌ಗ್ವಿನ್ ಸಹಿ ಹಾಕಿದ್ದಾರೆ.

ಅಂತಾರಾಷ್ಟ್ರೀಯ ಕಾನೂನು ಮತ್ತು ಉತ್ತಮ ರಾಜತಾಂತ್ರಿಕ ಪದ್ಧತಿಗೆ ಅನುಗುಣವಾಗಿ ಹಿಂದಿನ ಸರಕಾರದ ನಿರ್ಧಾರದ ‘ಪರಿಣಾಮ’ಗಳನ್ನು ತಾನು ಮರುಪರಿಶೀಲಿಸುವುದಾಗಿ ನೂತನ ವಿದೇಶ ಸಚಿವ ಕಾರ್ಲೋಸ್ ಹೋಮ್ಸ್ ಹೇಳಿದರು.

  ಈ ಘೋಷಣೆಗೆ ಮೊದಲು, ಫೆಲೆಸ್ತೀನ್ ರಾಷ್ಟ್ರಕ್ಕೆ ಮಾನ್ಯತೆ ನೀಡದ ಈ ವಲಯದ ಕೇವಲ 2 ದೇಶಗಳ ಪೈಕಿ ಕೊಲಂಬಿಯ ಒಂದಾಗಿತ್ತು. ಮಾನ್ಯತೆ ನೀಡದ ಇನ್ನೊಂದು ದೇಶ ಬೊಗೊಟ ಅಮೆರಿಕದ ಮಿತ್ರದೇಶವಾಗಿದೆ ಹಾಗೂ ಅದು ಇಸ್ರೇಲ್ ಜೊತೆ ಐತಿಹಾಸಿಕ ಸಂಬಂಧ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News