×
Ad

ಬಂಟ್ವಾಳ: ಸಿಡಿಲು ಬಡಿದು ಅಂಗಡಿ ಬೆಂಕಿಗಾಹುತಿ; ಲಕ್ಷಾಂತರ ರೂ. ನಷ್ಟ

Update: 2018-08-09 21:37 IST

ಬಂಟ್ವಾಳ, ಆ. 9: ಸಿಡಿಲು ಬಡಿದು ಅಂಗಡಿಯೊಂದು ಬೆಂಕಿಗಾಹುತಿಯಾದ ಘಟನೆ ಸಿದ್ದಕಟ್ಟೆಯಲ್ಲಿ ಗುರುವಾರ ಸಂಭವಿಸಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

ಇಲ್ಲಿನ ಕಾಲೇಜು ರಸ್ತೆಯ ಸೂರ್ಯಚಂದ್ರ ಜನರಲ್ ಸ್ಟೋರ್‌ಗೆ ಸಿಡಿಲು ಬಡಿದಿದ್ದು, ಅಂಗಡಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಅಂಗಡಿಯಲ್ಲಿದ್ದ ಫ್ರಿಜ್, ಕಪಾಟು, ದಿನಸಿ ಸಾಮಾನುಗಳು, ವಿದ್ಯುತ್ ಸಂಪರ್ಕ ಉಪಕರಣಗಳು ಸುಟ್ಟು ಭಸ್ಮವಾಗಿದೆ. ಗೋಡೆ ಬಿರುಕು ಬಿಟ್ಟಿದೆ.

ಗುರುವಾರ ಬೆಳಗ್ಗೆ ಸುಮಾರು 4 ಗಂಟೆಯ ಹೊತ್ತಿಗೆ ಘಟನೆ ನಡೆದಿದ್ದು, ಸ್ಥಳೀಯರು ಆಗಮಿಸಿ ಬೆಂಕಿ ನಂದಿಸಿದ್ದರೂ ಅದಾಗಲೇ ಅಂಗಡಿ ಸಂಪೂರ್ಣ ಸುಟ್ಟು ಹೋಗಿತ್ತು. ಘಟನೆಯಿಂದ ಸುಮಾರು ನಾಲ್ಕೂವರೆ ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಘಟನೆ ಕುರಿತು ಅಂಗಡಿ ಮಾಲಕ ಸುರೇಶ್ ಶೆಟ್ಟಿ ವೇಣೂರು ಪೊಲೀಸ್ ಠಾಣೆಗೆದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News