ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಮತ ಎಣಿಕೆ ದಿನಾಂಕ ಬದಲಾವಣೆ

Update: 2018-08-09 17:49 GMT

ಮಂಗಳೂರು, ಆ.9: ರಾಜ್ಯ ಚುನಾವಣಾ ಆಯೋಗವು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿ ಆದೇಶ ಹೊರಡಿಸಿತ್ತು. ವೇಳಾಪಟ್ಟಿಯಂತೆ ಮತ ಎಣಿಕೆಯನ್ನು ಸೆ.1ರಂದು ನಿಗದಿಗೊಳಿಸಿತ್ತು.

ಆಯೋಗವು ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಮಹಾನಗರ ಪಾಲಿಕೆಗಳಿಗೆ ಆ.31ಕ್ಕೆ ಚುನಾವಣೆ ಘೋಷಿಸಿದೆ. ಚುನಾವಣೆ ಘೋಷಿಸಿರುವ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಎಣಿಕೆಯನ್ನು ಏಕಕಾಲದಲ್ಲಿ ನಡೆಸುವ ಉದ್ದೇಶದಿಂದ ಮತ ಎಣಿಕೆಯನ್ನು ಸೆ.1ರ ಬದಲಿಗೆ ಸೆ.3ರಂದು ನಡೆಸಲು ಆದೇಶಿಸಿದೆ. ಚುನಾವಣಾ ನೀತಿ ಸಂಹಿತೆ ಸೆ.3ರವರೆಗೆ ಜಾರಿಯಲ್ಲಿದೆ. ಉಳಿದಂತೆ ಯಾವುದೇ ಬಲಾವಣೆ ಇರುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News