ಆ.12ರಿಂದ ರಾಜ್ಯ -ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆ

Update: 2018-08-10 12:44 GMT

ಉಡುಪಿ, ಆ.10: ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಉಡುಪಿ-ಮಣಿಪಾಲ ಹೆಜ್ಜೆಗೆಜ್ಜೆ ಪ್ರತಿಷ್ಠಾನದ ರಜತಮಹೋತ್ಸವ ಅಂಗವಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆಗಳನ್ನು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಏರ್ಪಡಿಸಲಾಗಿದೆ.

ಸಬ್‌ಜ್ಯೂನಿಯರ್ ರಾಜ್ಯಮಟ್ಟದ ಸ್ಪರ್ಧೆಯನ್ನು ಆ.12ರಂದು ಬೆಳಗ್ಗೆ 9:30ಕ್ಕೆ ಅದಮಾರು ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಉದ್ಘಾಟಿಸ ಲಿರುವರು. ಸಂಜೆ 4ಗಂಟೆಗೆ ನಡೆಯುವ ಬಹುಮಾನ ವಿತರಣಾ ಸಮಾರಂಭ ದಲ್ಲಿ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಆಶೀರ್ವ ಚನ ನೀಡಲಿರುವರು. ಈ ವಿಭಾಗದಲ್ಲಿ ರಾಜ್ಯದ ಸುಮಾರು 34ಕ್ಕೂ ಅಧಿಕ ಸ್ಪರ್ಧಿಗಳು ಈಗಾಗಲೇ ನೊಂದಣಿ ಮಾಡಿಕೊಂಡಿದ್ದಾರೆ ಎಂದು ಹೆಜ್ಜೆಗೆಜ್ಜೆಯ ನಿರ್ದೇಶಕಿ ವಿದುಷಿ ಯಶಾ ರಾಮಕೃಷ್ಣ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

12ರಿಂದ 16 ವರ್ಷ ವಯೋಮಿತಿಯವರ ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆ(ವೈಯಕ್ತಿಕ ಜೂನಿಯರ್ ವಿಭಾಗ) ಆ.19ರಂದು ನಡೆಯಲಿದ್ದು, ನೊಂದಣಿ ಮಾಡಲು ಆ.15 ಕೊನೆಯ ದಿನಾಂಕವಾಗಿದೆ. ಒಂದು ಕೃತಿ (ವಾಗ್ಗೇಯಕಾರರ ರಚನೆ )ಮತ್ತು ಒಂದು ತಿಲ್ಲಾನ ಒಟ್ಟು ಅವಧಿ 10 ನಿಮಿಷ. 16 ರಿಂದ 25 ವರ್ಷ ವಯೋಮಿತಿಯವರ ವೈಯಕ್ತಿಕ ಸೀನಿಯರ್ ವಿಭಾಗದ ಸ್ಪರ್ಧೆ ಆ.26ರಂದು ನಡೆಯಲಿದ್ದು, ನೊಂದಣಿ ಮಾಡಲು ಆ.22 ಕೊನೆಯ ದಿನಾಂಕವಾಗಿದೆ. ನಾಯಕ ಮತ್ತು ನಾಯಿಕಾ ಭಾವವುಳ್ಳ ಪದವರ್ಣ ಮತ್ತು ಒಂದು ಜಾವಳಿ ಒಟ್ಟು ಅವಧಿ 13 ನಿಮಿಷ.

ಪ್ರತಿ ವಿಭಾಗದಲ್ಲಿ ಮೊದಲನೇ ಬಹುಮಾನ ಪಡೆದವರಿಗೆ ಚಿನ್ನದ ಪದಕ ಹಾಗೂ ವಿಶೇಷ ಪ್ರಶಸ್ತಿಗಳನ್ನು ನೀಡಲಾಗುವುದು. ಎರಡನೆ ಮತ್ತು ಮೂರನೇ ಬಹುಮಾನ ವಿಜೇತರಿಗೆ ಆಕರ್ಷಕ ನಗದು ಪುರಸ್ಕಾರ ಮತ್ತು ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ಎಲ್ಲಾ ವಿಭಾಗಗಳಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ಮತ್ತು ಸ್ಮರಣಿಕೆಗಳನ್ನು ನೀಡಲಾಗುವುದು. ಭಾಗವಹಿಸುವವರಿಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. ದೂರದಿಂದ ಬರುವ ಸ್ಪರ್ಧಿಗಳಿಗೆ ಉಚಿತ ವಸತಿ ಸೌಲಭ್ಯ ಮತ್ತು ಊಟೋಪಚಾರಗಳನ್ನು ನೀಡಲಾ ಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ- 9449208477(ವಿದುಷಿ ಯಶಾ ರಾಮಕೃಷ್ಣ), 9448107623(ಡಾ.ರಾಮಕೃಷ್ಣ ಹೆಗಡೆ) ಸಂಪರ್ಕಿಸು ವಂತೆ ಕೋರಲಾಗಿದೆ. ಸುದ್ದಿಗೋಷ್ಠಿಯಲ್ಲಿ ರಜತ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಡಾ.ರಾಮ ಕೃಷ್ಣ ಹೆಗಡೆ, ವಿದುಷಿ ದೀಕ್ಷಾ ರಾಮಕೃಷ್ಣ, ಅಂಜನಾ ಸುಧಾಕರ್, ಅವಿನಾಶ್ ಹೆಗಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News