ಆರೆಸ್ಸೆಸ್ ಸಿದ್ಧಾಂತಿಯನ್ನು ಆರ್ ಬಿಐ ಮಂಡಳಿಗೆ ನೇಮಕಗೊಳಿಸಿದ ಮೋದಿ ಸರಕಾರ

Update: 2018-08-10 13:49 GMT

ಹೊಸದಿಲ್ಲಿ, ಆ.10: ಆರೆಸ್ಸೆಸ್ ಜತೆ ನಂಟು ಹೊಂದಿರುವ ಚಾರ್ಟರ್ಡ್ ಅಕೌಂಟೆಂಟ್ ಸ್ವಾಮಿನಾಥನ್ ಗುರುಮೂರ್ತಿ ಅವರನ್ನು ಸರಕಾರವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಂಡಳಿಗೆ ನೇಮಕ ಮಾಡಿದೆ.

ಸರಕಾರದ ನೋಟು ಅಮಾನ್ಯೀಕರಣವನ್ನು ಫೈನಾನ್ಶಿಯಲ್ ಪೋಖ್ರನ್ ಎಂದು ಬಣ್ಣಿಸಿದ್ದ ಗುರುಮೂರ್ತಿ ಆರೆಸ್ಸೆಸ್ ಸಹ ಸಂಸ್ಥೆ ಸ್ವದೇಶಿ ಜಾಗರಣ್ ಮಂಚ್ ಇದರ ಭಾಗವಾಗಿದ್ದಾರೆ. ಕೇಂದ್ರ ಸಂಪುಟದ ನೇಮಕಾತಿ ಸಮಿತಿಯು ಆರ್‍ಬಿಐ ಇದರ ಸೆಂಟ್ರಲ್ ಬೋರ್ಡ್ ನ ಅಧಿಕಾರೇತರ ನಿರ್ದೇಶಕರಾಗಿ  ನಾಲ್ಕು ವರ್ಷಗಳ ಅವಧಿಗೆ ಗುರುಮೂರ್ತಿಯವರ ನೇಮಕಾತಿಯನ್ನು ಅನುಮೋದಿಸಿದೆ.

“ಇದು ನಾನು ಹೊಂದುತ್ತಿರುವ ಮೊದಲ ನಿರ್ದೇಶಕ ಹುದ್ದೆ. ಇಲ್ಲಿಯ ತನಕ ಖಾಸಗಿ ಅಥವಾ ಸಾರ್ವಜನಿಕ ಕ್ಷೇತ್ರದ  ಯಾವ ಸಂಸ್ಥೆಯ ನಿರ್ದೇಶಕ ಹುದ್ದೆಯನ್ನೂ ಒಪ್ಪಿಲ್ಲ. ನನಗೆ ವಾಕ್ ಸ್ವಾತಂತ್ರ್ಯ ಬೇಕಿತ್ತು. ಆದರೆ ಸಾರ್ವಜನಿಕ ಹಿತಾಸಕ್ತಿಗೆ ಏನಾದರೂ ಮಾಡಬೇಕೆಂಬ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಈ ಹುದ್ದೆ ಒಪ್ಪಿದೆ” ಎಂದು ಗುರುಮೂರ್ತಿ ಟ್ವೀಟ್ ಮಾಡಿದ್ದಾರೆ.

ಅವರು ತಮಿಳು ಮ್ಯಾಗಝಿನ್ ‘ತುಘ್ಲಕ್’ ಇದರ ಸಂಪಾದಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News